ಚಿಕ್ಕಮಗಳೂರು: ಎಲ್ಲ ದರ ಏರಿಸಿಯಾಗಿದೆ. ಗಾಳಿಯೊಂದಕ್ಕೆ ಟ್ಯಾಕ್ಸ್ ಹಾಕಿಬಿಟ್ರೆ ಇವರು ಔರಂಗಜೇಬನ ಅಪ್ಪಂದಿರು ಅಂತ ತೋರ್ಸಕ್ಕೆ ಬೇರೇನೂ ಬೇಡ ಎಂದು ಸಿ.ಟಿ.ರವಿ ಲೇವಡಿ ಮಾಡಿದ್ದಾರೆ.`ಯಾರು ಏನೇ ಹೇಳಿದರೂ ನೀರಿನ ಕಂದಾಯ ಜಾಸ್ತಿ ಮಾಡೇ ಮಾಡ್ತೀವಿ’ ಎನ್ನುವ ಡಿಸಿಎಂ ಡಿಕೆಶಿ ಹೇಳಿಕೆಗೆ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು,
ಎಲ್ಲಾ ದರ ಏರಿಸಿ ಆಗಿದೆ. ಗಾಳಿ ಏಕೆ ಬಿಟ್ಟಿದ್ದೀರಾ ಅದನ್ನೂ ಏರಿಸಿಬಿಡಿ. ಗಾಳಿಗೊಂದಕ್ಕೆ ಟ್ಯಾಕ್ಸ್ ಹಾಕಿದ್ರೆ ಔರಂಗಜೇಬನ ಅಪ್ಪಂದಿರು ಅಂತ ತೋರ್ಸಕ್ಕೆ ಬೇರೇನೂ ಬೇಡ. ಔರಂಗಜೇಬ್ ಜೇಜಿಯಾ ತಲೆದಂಡ ಹಾಕಿದ್ನಂತೆ, ಇವ್ರು ಅವ್ರಪ್ಪ ಅಂತ ತೋರ್ಸಕ್ಕೆ ಆಗುತ್ತೆ ಎಂದು ವ್ಯಂಗ್ಯವಾಡಿದ್ದಾರೆ.ಡಿಕೆಶಿಯವರೇ ಜನವಿರೋಧಿ ಆಡಳಿತಕ್ಕೆ ಆಯಸ್ಸು ಕಮ್ಮಿ. ಲಿಕ್ಕರ್, ಸ್ಟಾಂಪ್ ಡ್ಯೂಟಿ, ಕರೆಂಟ್, ನೀರು ಹೀಗೆ ಎಲ್ಲಾ ಜಾಸ್ತಿ ಮಾಡಿದ್ದಾರೆ.
ಮುಂದಿನ ಬಾರಿ ಜನ ಬುದ್ಧಿ ಕಲಿಸುವುದಕ್ಕೆ ಈಗಾಗಲೇ ತೀರ್ಮಾನ ಮಾಡಿದ್ದಾರೆ. ಒಂದೆಡೆ ಗ್ಯಾರಂಟಿ ಕೊಟ್ಟು ಮತ್ತೊಂದೆಡೆ ಎಲ್ಲರ ಜೇಬಿಗೂ ಪಿಕ್ ಪಾಕೆಟ್ ಮಾಡುತ್ತಿದ್ದಾರೆ. ಕಳ್ಳರು ಅಟೆನ್ಷನ್ ಡ್ರಾ ಮಾಡುತ್ತಾ 5 ರೂ. ಬೀಳಿಸಿ 500 ರೂ. ಹೊಡಿಯುತ್ತಾರೆ. ಈಗ ಕಾಂಗ್ರೆಸ್ ಸರ್ಕಾರ ಅದನ್ನೇ ಮಾಡುತ್ತಿದೆ. ಜನರಿಗೆ 2,000 ರೂ. ಕೊಟ್ಟು 20 ಸಾವಿರ ರೂ. ಹೊಡೆಯುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ