ಯಾರು ಬೇಕಾದರೂ ದೆಹಲಿಗೆ ಬರಬಹುದು ಬರೋರರನ್ನು ನಾವು ಬೇಡ ಅನ್ನೋಕೆ ಹೋಗೋದಿಲ್ಲ
ಇಲಾಖೆ, ಪಾರ್ಟಿ ಕೆಲಸ ಇರುತ್ತದೆ ನಮಗೆ ಪಾರ್ಟಿ,ಇಲಾಖೆ ಸೇರಿ ಎಲ್ಲಾ ಕೆಲಸವೂ ಇದೆ ಅದಕ್ಕಾಗಿ ನಾನು ಸಿಎಂ ದೆಹಲಿಗೆ ಹೋಗ್ತಾ ಇದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಾಸಿಕ್ಯೂಷನ್ ಆದ ಮೇಲೆ ಎಲ್ಲವನ್ನೂ ಹೈಕಮಾಂಡ್ ಗೆ ತಿಳಿಸಬೇಕು.ಯಾವ ರೀತಿ ನಮ್ಮ ಗವರ್ನರ್ ಕಚೇರಿ ದುರುಪಯೋಗ ಆಗಿದೆ ಅಂತಾ ಹದಿನೈದು ಬಿಲ್ ಗಳನ್ನು ಗವರ್ನರ್ ವಾಪಸ್ಸು ಕಳುಹಿಸಿದ್ದಾರೆ ಸ್ಪಷ್ಟನೆ ಕೇಳಲಿ,ನಾನು ತಪ್ಪು ಅಂತಾ ಹೇಳೋದಿಲ್ಲ ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಗಳು ಯಾಕೆ ಇರಬೇಕು
ಬಿಜೆಪಿ ನಾಯಕರು ಹೇಳಿದ ಕೂಡಲೇ ವಾಪಸ್ಸು ಕಳುಹಿಸಿಬಿಟ್ಟರೆ ಸರೀನಾ….? ಗವರ್ನರ್ ನಡೆ ವಿರುದ್ಧ ಕಿಡಿ ಕಾರಿದ ಡಿಸಿಎಂ ಡಿಕೆಶಿ. ರಾಜ್ಯಪಾಲರಿಗೆ ದೇವರು ಒಳ್ಳೆಯ ಬುದ್ದಿ ಕೊಡಲಿ ದೇವರಲ್ಲಿ ಪ್ರಾರ್ಥನೆ ಮಾಡ್ತೇನೆಂದ ಡಿಕೆಶಿ
ಸರ್ಕಾರ ಬೀಳಿಸೋಕೆ ಯಾರ ಕೈಯಲ್ಲೂ ಆಗಲ್ಲ ನಾವು ಸುಮ್ಮನೆ ಕೂರುವವರಲ್ಲ ನಾವು ನಮ್ಮ ಕೆಲಸವನ್ನು ಮಾಡ್ತೇವೆಂದ ಡಿಕೆಶಿ ಜಿಂದಾಲ್ ನಲ್ಲಿ ಕೈಗಾರಿಕೆಗಳು ಬರಬೇಕು ಕೈಗಾರಿಕೋದ್ಯಮಿಗಳಿಗೆ ಉತ್ತೇಜನ ಕೊಡಬೇಕು
ಪಾಲಿಸಿ ಪ್ರಕಾರ ನಾವು ಮಾಡಿದ್ದೇವೆ ಹೊಸದಾಗಿ ನಾವು ಏನು ಕೊಟ್ಟಿಲ್ಲ..ಹಳೆಯ ಪದ್ದತಿ ಪ್ರಕಾರವೇ ಆಗಿದೆ ಬಿಜೆಪಿಯವರ ರೀತಿಯಲ್ಲಿಯೇ ನಾವು ಮಾಡಿದ್ದೇವೆ ಸರ್ಕಾರದ ನಿಲುವು ಸಮರ್ಥಿಸಿ ಕೊಂಡ ಡಿಸಿಎಂ ಡಿ.ಕೆ.ಶಿವಕುಮಾರ್