ಕಲಘಟಗಿ .ಧಾರವಾಡ ಕಲಘಟಗಿ ಭಾರತೀಯ ಜನತಾ ಪಾರ್ಟಿ ಧಾರವಾಡ ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ನಿಂಗಪ್ಪ ಸುತಗಟ್ಟಿ ನೇತೃತ್ವದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ದೊಡ್ಡಮಟ್ಟದ ಹಗರಣದ ರೂವಾರಿ ಭ್ರಷ್ಟ ಕಾಂಗ್ರೆಸ್ ಹಾಗೂ ಮುಖ್ಯಮಂತ್ರಿ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದರು.
ಈ ವೇಳೆಆಂಜನೇಯ ವೃತ್ತದಿಂದ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿ ನಾಗರಾಜ್ ಚಬ್ಬಿ ಮಾತನಾಡಿ,
ಕಾಂಗ್ರೆಸ್ ಸರ್ಕಾರ ಆಡಳಿತ ಬಂದ ನಂತರ ನಮ್ಮ ರಾಜ್ಯದಲ್ಲಿ ಇಲ್ಲಿವರೆಗೂ ಯಾವುದೇ ಒಂದು ಕೆಲಸ ಕೂಡ ಆಗಿಲ್ಲ ರಾಜ್ಯದಲ್ಲಿ ರೈತರ ಪರಿಸ್ಥಿತಿ ಚಿಂತಾ ಜನಕವಾಗಿದೆ. ಇಲ್ಲಿಯವರೆಗೂ ರಾಜ್ಯ ಸರ್ಕಾರ ಬೆಳೆ ಪರಿಹಾರ ನೀಡಿಲ್ಲ ಮಳೆಗಾಲದಿಂದ ಬೆಳೆದ ಬೆಳೆ ಸಂಪೂರ್ಣ ಅತಿವೃಷ್ಟಿಯಿಂದ ಹಾಳಾಗಿದೆ. ಜಿಲ್ಲೆ ಹಾಗೂ ತಾಲೂಕಿನ ಅಧಿಕಾರಿಗಳು ಇಲ್ಲಿವರೆಗೂ ಗ್ರಾಮಗಳಿಗೆ ಭೇಟಿ ನೀಡಿ ರೈತರ ಸಮಸ್ಯೆಯ ಬಗ್ಗೆ ಕ್ರಮ ಕೈಗೊಂಡಿಲ್ಲ ರೈತರ ಪರಿಸ್ಥಿತಿ ಅದೊಗತಿಗೆಸಾಗಿದೆ. ಜಿಲ್ಲೆಯ ಉಸ್ತುವಾರಿ ಸಚಿವರು ಧಾರವಾಡ ಹೆಡ್ ಕ್ವಾಟರ್ ನಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ನಡೆಸುತ್ತಿದ್ದಾರೆ. ತಾಲೂಕಿನ ಬಗ್ಗೆ ಕಾಳಜಿ ಇಲ್ಲದ ಶಾಸಕರಾಗಿದ್ದಾರೆ. ಮೂಡಾ ಹಗರಣದಲ್ಲಿ 400 ಕೋಟಿ ಲೂಟಿ ಮಾಡಿದಂತಹ ಸರ್ಕಾರ ಇದ್ದರೆ ಅದು ಭ್ರಷ್ಟ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವ ಭ್ರಷ್ಟ ರಾಜಕಾರಣಿ ಹಾಗೂ ದಲಿತ ಸಮುದಾಯದ ರಾಜ್ಯಪಾಲರಾದ ತಾವರ ಚಂದ್ ಗ್ಲೇಹೋಟ್ ಅವರನ್ನು ನಾಲಾಯಕ ಎಂದು ಅವಮಾನಿಸಿದ ಸಚಿವರು ನೈತಿಕ ಹೊಣೆ ಹೊತ್ತು ಕೂಡಲೆ ರಾಜೀನಾಮೆ ನೀಡಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಜಿಲ್ಲಾಧ್ಯಕ್ಷರಾದ ನಿಂಗಪ್ಪ ಸುತಗಟ್ಟಿ, ಮಾಜಿ ವಿಧಾನ ಪರಿಷತ್ ಸದಸ್ಯರಾದ ನಾಗರಾಜ್ ಚಬ್ಬಿ,ಈರಣ್ಣ ಜಡಿ, ಫಕ್ಕಿರೇಶ್ ನೆಸ್ರೆಕರ್, ಐಸಿ ಗೋಕುಲ್, ಮಾಂತೇಶ್ ತಹಸಿಲ್ದಾರ, ಅಣ್ಣಪ್ಪ ಓಲೆಕಾರ್, ಮದನ್ ಕುಲಕರ್ಣಿ. ಶಶಿಧರ್ ಹುಲಿಕಟ್ಟಿ, ಶಿವಯ್ಯ ಸಿಂದೋಗಿಮಠ,ಕಲ್ಲಪ್ಪ ಪುಟ್ಟಪ್ಪನವರ್, ಕಲ್ಮೇಶ ಮಾದನಬಾವಿ, ವೈ ಎನ್, ಪಾಟೀಲ್, ಸುರೇಶ್ ಶೀಲವಂತ, ಮಲ್ಲಯ್ಯ ಗೂಡಿಮನಿ, ಬಸವರಾಜ ಕರಡಿಕೊಪ್ಪ, ಚಂದ್ರು ಗೌಡ ಪಾಟೀಲ್, ಅರ್ಜುನ್ ಲಮಾಣಿ, ಬಸವರಾಜ್ ಮಾದರ್, ಬಾನಪ್ಪ ಲಮಾಣಿ, ಗುಡುಸಾಬ್ ಮಿಟಾಯಿಗಾರ, ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರು ಮುಖಂಡರು ಉಪಸ್ಥಿತರಿದ್ದರು.