ಗದಗ : ಜಿಲ್ಲೆಯ ಮುಂಡರಗಿ ತಾಲೂಕಿನ ಪೇಠಾಲೂರು ಗ್ರಾಮದ ರೈತ ಅಶೋಕ ಕಬ್ಬೇರಳ್ಳಿ ಜಮೀನಿನಲ್ಲಿ ತೊಗರಿ ಬೆಳೆಯಲ್ಲಿ ಸೋಲಾರ್ ಚಾಲಿತ ಯಂತ್ರದ ಮೂಲಕ ಕುಡಿ ಚಿವಟುವಿಕೆ ಪ್ರಾತ್ಯಕ್ಷತೆ ಹಾಗೂ ಟ್ರ್ಯಾಕ್ಟರ್ ಚಾಲಿತ ಬೂಮ್ ಮುಖಾಂತರ ಪಲ್ಸ್ ಮ್ಯಾಜಿಕ್ ಸಿಂಪರಣೆ ಪ್ರಾತ್ಯಕ್ಷಿಕೆ ಜರುಗಿತು.
ಗದಗ ಉಪ ಕೃಷಿ ನಿರ್ದೇಶಕಿ ಸ್ಪೂರ್ತಿ ಜಿ ಎಸ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಕೃಷಿ ಕಾರ್ಮಿಕರ ಕೊರತೆಯಿಂದ ಸರಿಯಾದ ಸಮಯದಲ್ಲಿ ಔಷಧ ಮತ್ತು ರಸಗೊಬ್ಬರ ಸಿಂಪಡಣೆ ತಡವಾಗುತ್ತಿದೆ ಟ್ರ್ಯಾಕ್ಟರ್ ಚಾಲಿತ ಬೂಮ್ ಮುಖಾಂತರ ಪಲ್ಸ್ ಮ್ಯಾಜಿಕ್ ಸಿಂಪರಣೆ ಮಾಡುವುದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ ತಾಲೂಕಿನ ವಿವಿಧ ಯೋಜನೆಗಳ ಅನುಷ್ಠಾನ ಹಾಗೂ ವಿವಿಧ ಬೆಳೆಗಳ ಮಾಹಿತಿ ಸಂಗ್ರಹಿಸಲು ಬೆಂಗಳೂರು ಕೇಂದ್ರ ಕಚೇರಿಯ ಉಪ ಕೃಷಿ ನಿರ್ದೇಶಕ ಮಂಜು ಎ ಸಿ ವಿವಿಧ ಬೆಳೆ ಉತ್ಪಾದನಾ ತಾಂತ್ರಿಕತೆಗಳ ಛಾಯಾ ಚಿತ್ರವನ್ನು ಸೇರೆ ಹಿಡಿದು ಮಾಹಿತಿ ನೀಡಿದರು.
ಮುಂಡರಗಿ ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ, ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿ ಡಾ.ವಿನಾಯಕ್ ನಿರಂಜನ್ ಮಾತನಾಡಿ ವಿಜ್ಞಾನಿಗಳು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತೊಗರಿ ಬೆಳೆಯಲ್ಲಿ ಸೋಲಾರ್ ಚಾಲಿತ ಯಂತ್ರದ ಮೂಲಕ ಕುಡಿ ಚಿವಟುವುದರಿಂದ ಹೆಚ್ಚಿನ ಚಿಗುರು ಬಂದು ಇಳುವರಿ ಹೆಚ್ಚು ಪಡೆಯಬಹುದೆಂದರು.
ಈ ಸಂದರ್ಭದಲ್ಲಿ ಡಂಬಳ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಎಸ್ ಬಿ ರಾಮೇನಹಳ್ಳಿ, ಎಸ್ ಎಸ್ ಮೂಡಲಗಿ, ಗೌರಿಶಂಕರ ಸಜ್ಜನರ, ಶಲವಡಿ ನಾಗರಾಜ, ಸಿದ್ದನಗೌಡ ಕರಿಗೌಡ, ರವಿ ಚಾಕಲಬ್ಬಿ, ರವಿ ಹ್ಯಾಟಿ, ಶ್ರೀಕಾಂತ ತಿಮ್ಮಾಪುರ, ತಿಮ್ಮಣ್ಣ ರಾಟಿ, ಸೋಮಪ್ಪ ಕಬ್ಬೆರಳ್ಳಿ ಉಪಸ್ಥಿತರಿದ್ದರು.