ಬೆಂಗಳೂರು: ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಎನ್.ಆರ್. ರಮೇಶ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ನಡೆದಿರುವ ಮತ್ತೊಂದು ಬೃಹತ್ ಹಗರಣ ಬಯಲು ಮಾಡಿದ್ದಾರೆ. ಈ ಬೃಹತ್ ಹಗರಣದಲ್ಲಿ ಬಿಬಿಎಂಪಿ ಹಾಗೂ BMICAPA ಯ ಹಲವು ಭ್ರಷ್ಟ ಅಧಿಕಾರಿಗಳು ಭಾಗಿಯಾಗಿದ್ದಾರೆ. TDR ಮಾಫಿಯಾದ ದೊರೆ ಎಂದೇ ಕುಖ್ಯಾತಿ ಪಡೆದಿರುವ ಪ್ರವೀಣ್ ಪಿ. ಷಾ ರವರು ಪಾಲುದಾರ ನಾಗಿರುವ M/s ವೆಂಕಟೇಶ್ವರ ಡೆವಲಪರ್ಸ್ ಎಂಬ ಸಂಸ್ಥೆ, ವಿಕ್ರಮ್ ಓಸ್ವಾಲ್ ಎಂಬ ಮತ್ತೊಬ್ಬ TDR ಮಾಫಿಯಾ ತಂಡದ ಸದಸ್ಯ ಪಾಲುದಾರನಾಗಿರುವ ಬಾಲಾಜಿ ಇನ್ಫ್ರಾಸ್ಟ್ರಕ್ಚರ್ & ಡೆವಲಪರ್ಸ್ ಎಂಬ ಸಂಸ್ಥೆ,
C. T. ತಿಮ್ಮಯ್ಯ ಮತ್ತು C. T. ಮರಿರಾಜು ರವರುಗಳು ಭ್ರಷ್ಟ ಅಧಿಕಾರಿಗಳ ಜೊತೆ ಸೇರಿ ನಡೆಸಿರುವ ಬೃಹತ್ ಹಗರಣ ಎಂದರು. TDR ಮಾಫಿಯಾದ ಸದಸ್ಯರುಗಳು ರಾಮನಗರ ಜಿಲ್ಲೆಯ ಮಾಗಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ “ಕೊಡಿಯಾಲ ಕರೇನಹಳ್ಳಿ” ಎಂಬ ಗ್ರಾಮದ ಸರ್ವೆ ನಂ: 384, 532, 537, 538, 543, 544, 545 ಮತ್ತು 546 ರ ಒಟ್ಟು 40.09 ಎಕರೆ ಗಳಷ್ಟು ವಿಸ್ತೀರ್ಣದ ಸ್ವತ್ತನ್ನು ಅಲ್ಲಿನ ರೈತರಿಂದ 2011-12 ರಲ್ಲಿ ಕೆಲವೇ ಲಕ್ಷ ರೂ. ಗಳಿಗೆ ಕ್ರಯಕ್ಕೆ ಪಡೆಯುತ್ತಾರೆ. ಅದಾದ ನಂತರ ಇವರುಗಳು ಸದರಿ ಸ್ವತ್ತಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ತ್ಯಾಜ್ಯದ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ “ತ್ಯಾಜ್ಯ ಸಂಸ್ಕರಣಾ ಘಟಕ”ವನ್ನು ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ ಎಂದು ರಮೇಶ್ ಆರೋಪಿಸಿದರು.