ಬಾಗಲಕೋಟೆ: ಉಚಿತ ಮತ್ತು ಕಡ್ಡಾಯ ಶಿಕ್ಷಣದಡಿಯಲ್ಲಿ ಮಕ್ಕಳ ಶೈಕ್ಷಣಿಕ ಕಲಿಕೆಗಾಗಿ ಸರ್ಕಾರವು ಕೋಟ್ಯಾಂತರ ಹಣ ಖರ್ಚು ಮಾಡುತ್ತಿದ್ದು, ಶಾಲಾ ಕಟ್ಟಡ ದುರಸ್ಥಿಯನ್ನು ಮಾಡುವಲ್ಲಿ ಹಿಂದೆ ಬಿದ್ದಿದೆ ಅಂತಲೇ ಹೇಳಬಹುದು.
ಅದಕ್ಕೊಂದು ಉದಾಹರಣೆ ಎಂಬಂತೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಕ್ರಾಸ್ ಬಳಿಯಿರುವ ಸರಕಾರಿ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಬಹುತೇಕ ಶಿಥಿಲಗೊಂಡಿದೆ. ಹಾಗಾಗಿ ಮಳೆಯಿಂದಾಗಿ ಶಾಲಾ ಮೇಲ್ಛಾವಣಿ ಸೋರುತ್ತಿರುವದರಿಂದ ಜೀವಭಯದಲ್ಲಿ ಮಕ್ಕಳು ಕಲಿಯಬೇಕಾಗಿದೆ.
ಈ ಕುರಿತಂತೆ ಆಡಳಿತಮಂಡಳಿ ಅಧಿಕಾರಿಗಳ ಗಮನಕ್ಕೂ ತಂದರು ಕೂಡ ಯಾವುದೇ ಪ್ರಯೋಜನವಾಗದೇ ಕೈಚೆಲ್ಲಿ ಕುಳಿತಿದ್ದಾರೆ.
ಕಾರಣ ಇನ್ನಾದರೂ ಶಾಲಾ ಕಟ್ಟಡ ದುರಸ್ಥಿ ಅಥವಾ ನೂತನ ಕಟ್ಟಡ ಮಂಜೂರಾತಿಗೆ ಶಿಕ್ಷಣ ಇಲಾಖೆ ಕ್ರಮವಹಿಸಬೇಕಾಗಿದೆ.