ಧಾರವಾಡ:- ಹದಿನೈದು ತಿಂಗಳಲ್ಲೇ ಅತಿ ಭ್ರಷ್ಟ ಸರ್ಕಾರ ಇದ್ದರೆ ಅದು ಕಾಂಗ್ರೆಸ್ ಎಂಬ ಕೀರಿಟವನ್ನು ಜನರೇ ಕೊಟ್ಟಿದ್ದಾರೆ ಎಂದ ವಿಧಾನ ಪರಿಷತ್ ವಿಪಕ್ಷ ನಾಯಕ ಅರವಿಂದ ಬೆಲ್ಲದ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸಿಎಂ ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಮನೆಗೆ ಹೋಗುವ ಸನ್ನಿವೇಶ ಹತ್ತಿರದಲ್ಲಿದೆ. ಆದ್ರೆ ಸಿದ್ದರಾಮಯ್ಯ ಕುರ್ಚಿ ಹೋಗುವ ಮುನ್ನ ಜಿಂದಾಲ್ ಕಂಪನಿಗೆ ಬೆಲೆಬಾಳು ಭೂಮಿಯನ್ನ ಕಡಿಮೆ ಬೆಲೆಗೆ ಕೊಡುವ ಮೂಲಕ ಮತ್ತೊಂದು ಹಗರಣ ಮೈಮೇಲೆ ಎಳೆದುಕೊಂಡಿದ್ದಾರೆ. ಅಂದು ವಿರೋಧ ಮಾಡಿದ್ದ ಹೆಚ್ಕೆ ಪಾಟೀಲ್ ಇಂದು ಪ್ರೆಸ್ ಬ್ರೀಫ್ ಮಾಡಿದ್ದಾರೆ. ಜೆಎಸ್ಡಬ್ಲ್ಯು ಅಗ್ರಿಮೆಂಟ್ ಮಾಡಿಕೊಂಡಿದೆ. ಪುರಾತನ ಕಾಲದಿಂದ ಬಂದ ಮಿನರಲ್ ಆಸ್ತಿಯನ್ನು ಎಕರೆಗೆ 1ಲಕ್ಷ 20ಸಾವಿರಕ್ಕೆ ಕೊಡ್ತಿದ್ದಾರೆ. ಇಷ್ಟು ಕಡಿಮೆ ಬೆಲೆಗೆ ಕೊಡ್ತಿರಲ್ಲ ಸಿದ್ದರಾಮಯ್ಯನವರೇ ಇದೇನು ನಿಮ್ಮಪ್ಪನ ಮನೆ ಆಸ್ತಿಯೇನು? ಎಂದು ಹರಿಹಾಯ್ದರು.
ಭೂಮಿಯನ್ನು ಕಡಿಮೆ ಬೆಲೆ ಮಾರಾಟ ಮಾಡಿ ಒಳ ಒಪ್ಪಂದ ಮಾಡಿಕೊಂಡು ಲೂಟಿ ಹೊಡೆಯುತ್ತಿದ್ದಾರೆ. ಇಂದಿನ ದರಕ್ಕೆ ಮಾರಾಟ ಮಾಡಿದ್ರೆ ನಮ್ಮ ವಿರೋಧ ಇಲ್ಲ. ಜಡ್ಜಮೆಂಟ್ ಪ್ರಕಾರ ಇಂದಿನ ದರ ಎಷ್ಟಿದೆಯೋ ಆ ಬೆಲೆ ಭೂಮಿ ಮಾರಾಟ ಮಾಡಬೇಕು. ಆದರೆ 3,666 ಎಕರೆ ಜಾಗ ಬರೀ 20 ಕೋಟಿಗೆ ಮಾರಾಟ ಮಾಡ್ತೀದ್ದೀರಿ. ನೀವು ಮತ್ತೆ ಸಿಎಂ ಆಗೊಲ್ಲ ಅಂತಾ ಕಡಿಮೆ ಬೆಲೆಗೆ ಭೂಮಿ ಮಾರಾಟ ಮಾಡಿದ್ದೀರಾ? ನಾನು ನಮ್ಮ ಪಕ್ಷ ಇದರ ವಿರುದ್ಧ ತೀವ್ರವಾಗಿ ಹೋರಾಟ ಮಾಡುತ್ತೇವೆ. ಕೋರ್ಟ್ ಮೆಟ್ಟಿಲೇರಿ ಹೋರಾಟ ಮಾಡ್ತೇವೆ. ವಯನಾಡಿನಲ್ಲಿ ಏನಾಯ್ತು ಗಮನಿಸಿದ್ದೀರಿ. ಸಿದ್ದರಾಮಯ್ಯ ತಮ್ಮ ನಿರ್ಧಾರ ಕೂಡಲೇ ಹಿಂಪಡೆದರೆ ಸರಿ. ಇಲ್ಲವಾದರೆ ಇದನ್ನ ತಾರ್ಕಿಕ ಅಂತ್ಯ ಕಾಣುವವರೆಗೆ ಕಾನೂನು ಹೋರಾಟ ಮಾಡಲಿದ್ದೇವೆ ಎಂದು ಎಚ್ಚರಿಸಿದರು.
ಬೆಲೆ ಬಾಳುವ ಭೂಮಿ ಅಷ್ಟು ದುಡ್ಡಿಗೆ ಒಂದು ಎಕರೆನೂ ಸಿಗೊಲ್ಲ ಅಂತಾದ್ರಲ್ಲಿ ಸಾವಿರಾರು ಎಕರೆ ಮಾರಾಟ ಮಾಡಲು ಮುಂದಾಗಿದ್ದರೆಂದರೆ ಇದರಲ್ಲಿ ಡೀಲ್ ನಡೆದಿರೋದ್ರಲ್ಲಿ ಅನುಮಾನವೇ ಇಲ್ಲ. ಇದರ ವಿರುದ್ಧ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.