ಕೋಲಾರ: ಚುನಾವಣಾ ಸಂದರ್ಭದಲ್ಲಿ ಉರಿಗೌಡ ನಂಜೇಗೌಡ ವಿಚಾರದಲ್ಲಿ ರಾಜಕೀಯ ಮಾಡುವಂತದ್ದು ಯಾರಿಗು ಶೋಭೆ ತರುವಂತದ್ದಲ್ಲ ಎಂದು ಜೆಡಿಎಸ್ ರಾಜ್ಯಯುವ ಘಟಕ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಕೋಲಾರ ಜಿಲ್ಲೆಯ ಬಂಗರಾಪೇಟೆ ತಾಲೂಕಿನಲ್ಲಿ ಜೆಡಿಎಸ್ ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ರು. ಯಾರೊ ಯಾರೊ ಹೆಸರುಗಳನ್ನು ತಂದು ಚುನಾವಣಾ ಸಂದರ್ಭದಲ್ಲಿ ಜನರಿಗೆ ದಿಕ್ಕು ತಲುಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಇದು ಸರಿಯಲ್ಲ.
ಕರ್ನಾಟಕ ರಾಜ್ಯದಲ್ಲಿ ಎಲ್ಲ ರೀತಿಯಾದ ಸಮುದಾಯಗಳು ಇವೆ ಇವರ ಉದ್ದೇಶಗಳು ಒಕ್ಕಲಿಗರ ಮತಗಳನ್ನು ಬೇರ್ಪಡಿಸುತ್ತವೆ ಎಂಬ ಭಾವನೆಯಿಂದ ಎಲ್ಲಾ ವಿಚಾರಗಳನ್ನು ಬಿಜೆಪಿ ಯವರು ಪ್ರಸ್ತಾಪ ಮಾಡುತ್ತಿದ್ದಾರೆ ಇದು ಬಹಳ ದಿನ ಉಳಿಯುವುದಿಲ್ಲ ಇದೆಲ್ಲವೂ ತಾತ್ಕಾಲಿಕವಷ್ಟೆ ನಾಲ್ಕು ವರ್ಷಗಳಲ್ಲಿ ಏನು ಬಿಜೆಪಿ ಸರ್ಕಾರ ಆಡಳಿತವನ್ನು ನಡೆಸಿ ಯೋಜನೆಗಳನ್ನು ಕೊಟ್ಟಿದ್ದೆ.ಜನರ ಕಷ್ಟದ ಬಗ್ಗೆ ಚರ್ಚೆ ಮಾಡಲಿ ಅದು ಬಿಟ್ಟು ಉರೀಗೌಡ ನಂಜೇಗೌಡರ ಬಗ್ಗೆ ಚರ್ಚೆ ಮಾಡಿದರೆ ಯಾರ ಹೊಟ್ಟನು ತುಂಬುವುದಿಲ್ಲ ಎಂದು ತಿಳಿಸಿದರು.
ಸಿದ್ದರಾಮಣ್ಣ ಈ ರಾಜ್ಯದ ಹಿರಿಯ ನಾಯಕರು ಅವರ ಲೆಕ್ಕಾಚಾರಗಳು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟಿದ್ದು ಅದರ ಬಗ್ಗೆ ಮಾತನಾಡುವುದಕ್ಕೆ ನಾನು ಸೂಕ್ತ ವ್ಯಕ್ತಿಯಲ್ಲ ಎಂದರು.ನಾಗಂಮಗಲ ವಿಧಾನಸಭಾ ಕ್ಷೇತ್ರ 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿ ರೈತ ಸಂಘ ಎಲ್ಲರು ನನ್ನ ವಿರುದ್ದ ತಿರುಗಿ ಬಿದ್ದಂತಹ ಸಂದರ್ಭದಲ್ಲಿ ನಾಗಮಂಗಲ ಕ್ಷೇತ್ರದ ಜನರು 8000 ಮತಗಳ ಲೀಡ್ ನೀಡಿದಂತ ಕ್ಷೇತ್ರ ಅದು ಯಾರು ಯಾರಿಗೆ ಬುದ್ದಿ ಕಲಿಸುತ್ತಾರೆ ಎಂಬುದು ನಾಗಮಂಗಲ ಜನತೆಗೆ ಬಿಟ್ಟಿದ್ದು ಎಂದು ಹೇಳಿದರು.