ನೇಪಾಳದಲ್ಲಿ ಸಂಭವಿಸಿದ್ದ ಭೀಕರ ಬಸ್ ಅಪಘಾತದಲ್ಲಿ ಮೃತಪಟ್ಟ, ಮಹಾರಾಷ್ಟ್ರದ 27 ಮಂದಿಯ ಶವಗಳ ಮರಣೋತ್ತರ ಪರೀಕ್ಷೆಯ ಬಳಿಕ ತವರಿಗೆ ಕಳುಹಿಸಲಾಯಿತು.
10 ದಿನ ಪ್ರವಾಸಕ್ಕಾಗಿ ನೇಪಾಳಕ್ಕೆ ತೆರಳಿದ್ದ ಮಹಾರಾಷ್ಟ್ರದ ಯಾತ್ರಾರ್ಥಿಗಳಿದ್ದ ಬಸ್ ನದಿಗೆ ಉರುಳಿಬಿದ್ದು 27 ಮಂದಿ ಮೃತಪಟ್ಟಿದ್ದರು. ಮರಣೋತ್ತರ ಪರೀಕ್ಷೆಯ ಬಳಿಕ ಭಾರತೀಯ ವಾಯುಪಡೆಯ ವಿಮಾನದಲ್ಲಿ ಮಹಾರಾಷ್ಟ್ರದ ನಾಸಿಕ್ಗೆ ಶವಗಳನ್ನು ಒಯ್ಯಲಾಯಿತು ಎಂದು ಹೇಳಿಕೆ ತಿಳಿಸಿದೆ.
ಭಾರತದ ನೋಂದಣಿ ಸಂಖ್ಯೆಯ ಬಸ್ನಲ್ಲಿ ಸುಮಾರು 40 ಪ್ರಯಾಣಿಕರಿದ್ದು, ರಾಜಧಾನಿ ಕಠ್ಮಂಡುವಿನಿಂದ 110 ಕಿಮೀ ದೂರದಲ್ಲಿರುವ ತನಾಹುನ್ ಜಿಲ್ಲೆಯಲ್ಲಿನ ಆಯಿನಾ ಪಹಾರಾದ ಮರ್ಸ್ಯಂಗ್ಡಿ ಎಂಬ ನದಿಗೆ ಬಸ್ ಉರುಳಿತ್ತು.
ನದಿಗೆ ಉರುಳಿ ಬಿದ್ದ ಬಸ್ ಪೋಖರಾದಿಂದ ಕಠ್ಮಂಡುವಿಗೆ ತೆರಳುತ್ತಿತ್ತು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಉತ್ತರ ಪ್ರದೇಶದ ಯುಪಿ ಎಫ್ಟಿ 7623 ನಂಬರ್ ಪ್ಲೇಟ್ ಹೊಂದಿದ್ದ ಬಸ್, ನದಿಯೊಳಗೆ ಉರುಳಿ ಬಿದ್ದಿದ್ದು, ನದಿಯ ತೀರದಲ್ಲಿ ಸಿಲುಕಿಕೊಂಡಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.