ಚಿಕ್ಕಬಳ್ಳಾಪುರ: ಇದೇ ಮೊದಲ ಬಾರಿಗೆ ಶಾಸಕರಾದ ನಂತರ ಶಾಸಕ ಪ್ರದೀಪ್ ಈಶ್ವರ್ ಹಾಗೂ ಸಂಸದ ಡಾ.ಕೆ.ಸುಧಾಕರ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದಗ್ದಾರೆ. ಮೊದಲ ಕಾರ್ಯಕ್ರಮದಲ್ಲೇ ಇಬ್ಬರು ನಾಯಕರು ನಾನಾ ನೀನಾ ಅಂತ ಏಟಿಗೆ ಏಟು ಎದಿರೇಟು ನೀಡುವ ಮೂಲಕ ರಾಜಕೀಯ ಸಂಘರ್ಷಕ್ಕೆ ಸಾಕ್ಷಿಯಾಗಿದ್ದಾರೆ.
ಚಿಕ್ಕಬಳ್ಳಾಪುರ ನಗರದಲ್ಲಿ ಜಿಲ್ಲಾಡಳಿತದ ವತಿಯಿಂದ ನಡೆದ ಶ್ರೀಕೃಷ್ಣಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಕೃಷ್ಣ ಭವನ ನಿರ್ಮಾಣ ವಿಚಾರದಲ್ಲಿ ಇಬ್ಬರು ನಾನಾ ನೀನಾ ಅಂತ ಅನುದಾನದ ಘೋಷಣೆ ವಿಚಾರದಲ್ಲಿ ಪರಸ್ಪರರು ಏಟು ಎದಿರೇಟು ನೀಡಿದ್ದಾರೆ.
ಇನ್ನೂ ಇದೇ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ವಿಚಾರವಾಗಿಯೂ ಶಾಸಕ ಪ್ರದೀಪ್ ಈಶ್ವರ್ ಗರಂ ಆಗಿದ್ದಾರೆ. ಸಂಸದರ ಬೆಂಬಲಿಗರು ವೇದಿಕೆ ಏರಿದ್ದಕ್ಕೆ ಶಿಷ್ಟಾಚಾರ ಫಾಲೋ ಮಾಡುವಂತೆ ಕನ್ನಡ ಹಾಗೂ ಸಂಸ್ಕøತಿ ಇಲಾಖೆ ಅಧಿಕಾರಿಗೆ ವೇದಿಕೆಂiÀಲ್ಲೇ ಸಖತ್ ಕ್ಲಾಸ್ ತಗೊಂಡು ಪ್ರೋಟೋಕಾಲ್ ಫಾಲೋ ಮಾಡುವಂತೆ ಗರಂ ಆದರು. ಇನ್ನೂ ಸುಧಾಕರ್ ಅಭಿವೃದ್ದಿ ವಿಚಾರದಲ್ಲಿ ತಾನು ಮಾಡಿದ ಕೆಲಸಗಳು ಸಾಕ್ಷಿ ಗುಡ್ಡೆಯಾಗಿವೆ ಎಂಬ ಹೇಳಿಕೆಗೆ ಪ್ರದೀಪ್ ಈಶ್ವರ್ ತಮ್ಮ ಭಾಷಣದಲ್ಲಿ ಜಿಲ್ಲೆಗೆ ತಮ್ಮ ಸರ್ಕಾರದಿಂದ 800 ಕೋಟಿ ಅನುದಾನ ತಂದಿರುವುದೇ ಸಾಕ್ಷಿಗುಡ್ಡೆಯಾಗಿದೆ ಅಂತ ಸಂಸದ ಸುಧಾಕರ್ ಗೆ ಟಾಂಗ್ ಕೊಟ್ರು..