ಹುಬ್ಬಳ್ಳಿ: ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರೋಟರಿ ಕ್ಲಬ್ ಸೆವೆನ್ ಹಿಲ್ಸ್ ಹಾಗೂ ಧಾರವಾಡ ಆಯೋಜಿಸಿದ ‘ಡಿಸ್ಟಿಕ್ ಇಂಟರ್ಯಾಕ್ಟ್ ಲೀಡರ್ಶಿಪ್ ಪೋರಮ್ ಮಿಟ್’ ಡ್ಯಾನ್ಸ್ ಸ್ಪರ್ಧೆಯಲ್ಲಿ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್ಟೌನ್ನ ಇಂಟರ್ಯಾಕ್ಟ್ ಕ್ಲಬ್ ಆಫ್ ಸರಸ್ವತಿ ಸ್ಕೂಲ್ ಹುಬ್ಬಳ್ಳಿ ಇವರು ಪ್ರಥಮ ಬಹುಮಾನ ಪಡೆದಿದೆ.ಈ ಸ್ಪರ್ಧೆಯಲ್ಲಿ ಕರ್ನಾಟಕ, ಗೋವಾ, ಮಹಾರಾಷ್ಟ್ರದ ಸುಮಾರು 20 ಮಕ್ಕಳ ತಂಡಗಳು ಭಾಗವಹಿಸಿದ್ದವು.
ರೋಟರಿ ಮಿಡ್ಟೌನ್ ಅಧ್ಯಕ್ಷರಾದ ದಿನೇಶ ಶೆಟ್ಟಿ, ಕಾರ್ಯದರ್ಶಿಗಳಾದ ಪ್ರವೀಣ ಭನ್ಸಾಲಿ, ಶಾಲೆಯ ಅಧ್ಯಕ್ಷರಾದ ಲಿಂಗರಾಜ ಪಾಟೀಲ, ಪ್ರಾಂಶುಪಾಲರಾದ ಶ್ರೀಮತಿ ಕೀರ್ತಿ ದೇಶಪಾಂಡೆ, ಅಧ್ಯಾಪಕಿಯರಾದ ಶ್ರೀಮತಿ ರೂಪಾ ಕುಲಕರ್ಣಿ, ಶ್ರೀಮತಿ ಶೈಲಜಾ, ಕು. ರಶ್ಮಿ ಶ್ರೀಮತಿ ಕವಿತಾ ಪಲ್ಲೇದ ಮತ್ತು ಅಧ್ಯಾಪಕ ವಿನಯಕುಮಾರ ಹಾಗೂ ವಿದ್ಯಾರ್ಥಿ ವೃಂದದವರು ಅಭಿನಂದನೆ ಸಲ್ಲಿಸಿ, ಹರ್ಷವನ್ನು ವ್ಯಕ್ತಪಡಿಸಿದರು.