ನಟ ದರ್ಶನ್ ರನ್ನು ಅಭಿಮಾನಿಗಳು ಡಿ ಬಾಸ್ ಎಂದು ಕರೆಯುತ್ತಾರೆ. ಆದರೆ ಇದೀಗ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ದರ್ಶನ್ ಹೆಸರಿನ ಮುಂದೆ ಅಲಿಯಾಸ್ ಸೇರ್ಪಡೆಯಾಗಿದೆ. ಸದ್ಯ ದಾಖಲಾಗಿರುವ ಎರಡು ಎಫ್ಐಆರ್ ನಲ್ಲಿ ನಟ ದರ್ಶನ್ ಅಲಿಯಾಸ್ ಡಿ ಬಾಸ್ ಎಂದು ಉಲ್ಲೇಖ ಮಾಡಲಾಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ಗೆ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 3 ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೊದಲನೇ ಕೇಸ್ ಬೇಗೂರು ಇನ್ಸ್ಪೆಕ್ಟರ್ ಕೃಷ್ಣ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಯಲಿದ್ದು ಜೈಲಿನ ಲಾನ್ನಲ್ಲಿ ಕುಳಿತು ಟೀ, ಸಿಗರೇಟ್ ಸೇವನೆ ಬಗ್ಗೆ ತನಿಖೆ ನಡೆಸಲಿದ್ದಾರೆ. ಈ ಕೇಸ್ನಲ್ಲಿ ದರ್ಶನ್ A1 ಆರೋಪಿಯಾಗಿದ್ದಾರೆ. ದರ್ಶನ್ ಮ್ಯಾನೇಜರ್ A2, ವಿಲ್ಸನ್ ಗಾರ್ಡನ್ ನಾಗ A3 ಹಾಗೂ ಕುಳ್ಳಸೀನಾ A4 ಆರೋಪಿಗಳಾಗಿದ್ದಾರೆ.
ಇನ್ನೂ 2ನೇ ಎಫ್ ಐ ಆರ್ ಜೈಲಿನಲ್ಲಿ ದರ್ಶನ್ ವಿಡಿಯೋ ಕಾಲ್ನಲ್ಲಿ ಮಾತನಾಡಿದ ಬಗ್ಗೆಯಾಗಿದೆ. ಈ ಪ್ರಕರಣದ ತನಿಖೆಯನ್ನ ಹುಳಿಮಾವು ಇನ್ಸ್ಪೆಕ್ಟರ್ ನಡೆಸಲಿದ್ದಾರೆ. ವೈರಲ್ ಆಗಿರುವ ಫೋಟೋ, ವಿಡಿಯೋ ಕಾಲ್ ಬಗ್ಗೆ ತನಿಖೆ ಆಗಲಿದೆ.
ಜೈಲು ಅಧಿಕಾರಿಗಳ ಕರ್ತವ್ಯ ಲೋಪದ ಬಗ್ಗೆ 3ನೇ FIR ದಾಖಲಾಗಿದ್ದು, ಎಲೆಕ್ಟ್ರಾನಿಕ್ ಸಿಟಿ ಎಸಿಪಿ ಮಂಜುನಾಥ್ ಈ ಬಗ್ಗೆ ತನಿಖೆ ನಡೆಸಲಿದ್ದಾರೆ. ಈ ಪ್ರಕರಣದಲ್ಲಿ ದರ್ಶನ್ ಹೆಸರಿಲ್ಲ, ಕೇವಲ ಜೈಲು ಸಿಬ್ಬಂದಿ ವಿರುದ್ಧ ತನಿಖೆ ನಡೆಯಲಿದೆ. ಈ ಪ್ರಕರಣದಲ್ಲಿ A1-ಸುದರ್ಶನ್, A2-ಮುಜೀಬ್, A3-ಪರಮೇಶ ನಾಯಕ್ ಲಮಾಣಿ, A4- ಕೆ ಬಿ ರಾಯಮನೆ ಅವರ ಹೆಸರಿದೆ.
ಇಷ್ಟು ದಿನ ಅಭಿಮಾನಿಗಳಿಂದ ಡಿ ಬಾಸ್ ಎಂದು ಕರೆಯಿಸಿಕೊಳ್ಳುತ್ತಿದ್ದ ನಟ ದರ್ಶನ್ ಹೆಸರಿಗೆ ಅಲಿಯಾಸ್ ಹೆಸರು ಸೇರ್ಪಡೆಯಾಗಿದೆ. ಸದ್ಯ ದಾಖಲಾಗಿರುವ ಎರಡು ಎಫ್ಐಆರ್ ನಲ್ಲಿ ನಟ ದರ್ಶನ್ ಅಲಿಯಾಸ್ ಡಿ ಬಾಸ್ ಎಂದು ಉಲ್ಲೇಖ ಮಾಡಲಾಗಿದೆ. ಏಕೆಂದರೆ ಜೈಲಿನ ವೈರಲ್ ವಿಡಿಯೋದಲ್ಲಿ ಡಿ ಬಾಸ್ ಎಂದು ಕರೆದಿದ್ದು, ಈ ಹಿನ್ನೆಲೆಯಲ್ಲಿ ಎಫ್ ಐ ಆರ್ ನಲ್ಲೂ ಡಿ ಬಾಸ್ ಎಂದು ಉಲ್ಲೇಖ ಮಾಡಲಾಗಿದೆ.