ನಾದಬ್ರಹ್ಮ ಹಂಸಲೇಖ ಸದಾ ಒಂದಲ್ಲ ಒಂದು ಕಾರಣಕ್ಕೆ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಲೆ ಇರುತ್ತಾರೆ. ಇದೀಗದೇಶದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಸಂವಿಧಾನವಾಗಿರುವ ಚಿಂತನಗಂಗಾ ಎಂಬ ಪುಸ್ತಕವನ್ನು ಓದುವ ಬ್ರಾಹ್ಮಣರು ರಾಷ್ಟ್ರದಲ್ಲಿ ಏನು ನಡೆಯುತ್ತದೆಯೋ ಅದರ ವಿರುದ್ಧ ಪ್ರತಿದಾಳಿ ಮಾಡಲು ಸಿದ್ಧಗೊಳ್ಳುತ್ತಾರೆ ಎಂದು ಹೇಳುವ ಮೂಲಕ ವಿವಾದಾ ಹುಟ್ಟುಹಾಕಿದ್ದಾರೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಬ್ರಾಹ್ಮಣರ ವಿರುದ್ಧ ಮಾತನಾಡುವ ಮೂಲಕ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಾನು ಕಳೆದ 40 ವರ್ಷಗಳ ಹಿಂದೆ ಚಿಂತನ ಗಂಗಾ ಎಂಬ ಪುಸ್ತಕವನ್ನು ಓದಿದೆ. ಈ ಪುಸ್ತಕ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಸಂವಿಧಾನವಾಗಿದೆ. ಇದನ್ನು ಚಿಂತನ ಗಂಗಾ ಎಂಬ ಪುಸ್ತಕವಾಗಿ ಮುದ್ರಣ ಮಾಡಿ ಜನರಿಗೆ ಹಂಚಿಕೆ ಮಾಡುತ್ತಾರೆ. ಅವರು ನೀಡಿದ ಪುಸ್ತಕ ಎಷ್ಟು ಕೆಲಸ ಮಾಡುತ್ತದೆಂದರೆ ಪ್ರತಿಯೊಬ್ಬ ಬ್ರಾಹ್ಮಣರ ಮನೆಯಲ್ಲಿಯೂ ಭಗವದ್ಗೀತೆ ಪುಸ್ತಕದ ಪಕ್ಕದಲ್ಲಿಯೇ ಅದನ್ನು ಇಟ್ಟುಕೊಂಡಿರುತ್ತಾರೆ ಎಂದರು.
ಮುಂದುವರೆದು, ಬ್ರಾಹ್ಮಣರು ಭಗವದ್ಗೀತೆಯನ್ನೂ ಓದುವುದರ ಜೊತೆಗೆ ಆರ್ಎಸ್ಎಸ್ನವರು ಕೊಟ್ಟ ಚಿಂತನಗಂಗಾ ಪುಸ್ತಕವನ್ನು ಕೂಡ ಓದುತ್ತಾರೆ. ನಂತರ ರಾಷ್ಟ್ರದಲ್ಲಿ ಏನೇನು ನಡೆಯುತ್ತದೆ ಎಂಬುದನ್ನು ಗಮನಿಸಿ ಅದಕ್ಕೆ ವಿರುದ್ಧವಾದ ಪ್ರತಿದಾಳಿಯನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ಚಿಂತನಗಂಗಾ ಪುಸ್ತಕದಲ್ಲಿ ಮುದ್ರಿಸಿ ಮೆಲ್ಲ ಮೆಲ್ಲಗೆ ಎಲ್ಲ ಬ್ರಾಹ್ಮಣರಿಗೆ ಸಂದೇಶವನ್ನು ಕಳಿಸುತ್ತಾರೆ ಎಂದು ಹಂಸಲೇಖಾ ಹೇಳಿದ್ದಾರೆ.
ಹಂಸಲೇಖಾ ಹೇಳಿಕೆಯ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ನೆಟ್ಟಿಗರೊಬ್ಬರು, ಕನ್ನಡದ ಹೆಸರಲ್ಲಿ ಬ್ರಾಹ್ಮಣರ ವಿರುದ್ಧ ದ್ವೇಷ ಸಾರುವ ಪಕ್ಷ. ಹೌದು! ಕನ್ನಡದ ಬಗ್ಗೆ ಮಾತಾಡ್ತಿವಿ ಅಂತ ಜನರನ್ನ ಮಂಗ ಮಾಡಿ, ದೇವರ ಪೂಜೆ ಮಾಡೋ ಪೂಜಾರಿಗಳ ಮೇಲೆ ವಿಷ ಬಿತ್ತುವ ಕೆಲಸ ಮಾಡ್ತಿದ್ದಾರೆ. ಇವರಿಗೆ ಕನ್ನಡದ ಮೇಲೆ ಪ್ರೀತಿ ಅಲ್ಲ, ಬ್ರಾಹ್ಮಣರ ಮೇಲೆ ದ್ವೇಷ ಅಷ್ಟೆ. ಇವರು ಹುಚ್ಚಾಸ್ಪತ್ರೆಲಿ ಇರಬೇಕಾದ ಹಂಸಲೇಖ ಎಂದು ಕಿಡಿಕಾರಿದ್ದಾರೆ.