73ನೇ ವಯಸ್ಸಿನಲ್ಲೂ ಸೂಪರ್ ಸ್ಟಾರ್ ರಜನಿಕಾಂತ್ ಯುವ ನಟರು ನಾಚುವಂತೆ ನಟಿಸುತ್ತಿದ್ದಾರೆ. ಆಕ್ಷಯ್ ಸಿನಿಮಾಗಳಲ್ಲಿ ರಜನಿ ಎತ್ತಿದ ಕೈ. ಈ ಮೂಲಕ ರಜನಿಕಾಂತ್ ಅನೇಕ ಕಲಾವಿಧರಿಗೆ ಮಾದರಿ ಆಗಿದ್ದಾರೆ. ಆದರೆ ಇದನ್ನು ಕೆಲವರು ನೆಗೆಟಿವ್ ಆಗಿ ತೆಗೆದುಕೊಂಡಿದ್ದಾರೆ. ಈ ವಯಸ್ಸಿನಲ್ಲಿ ರಜನಿಕಾಂತ್ ನಟಿಸುತ್ತಿರವುದಕ್ಕೆ ಉಳಿದವರಿಗೆ ಅವಕಾಶ ಸಿಗುತ್ತಿಲ್ಲ ಎಂದು ಕೆಲವರು ಟೀಕಿಸಿದ್ದಾರೆ.
ರಜನಿಕಾಂತ್ ಬಗ್ಗೆ ಟೀಕಿಸಿರುವ ಡಿಎಂಕೆ ನಾಯಕ ದೊರೈ ಮುರುಗನ್ ಅವರು, ‘ರಜನಿಕಾಂತ್ ಅವರು ಹಲ್ಲು-ಕೂದಲು ಕಳೆದುಕೊಂಡ ಬಳಿಕವೂ ನಟನೆ ಮಾಡುತ್ತಿದ್ದಾರೆ. ರಜನಿಕಾಂತ್ ಅಂಥ ವಯಸ್ಸಾದ ನಟರು ಈಗಲೂ ನಟಿಸುತ್ತಿರುವುದಕ್ಕೆ ಯುವ ಕಲಾವಿದರಿಗೆ ಸಿನಿಮಾದಲ್ಲಿ ನಟಿಸೋ ಚಾನ್ಸ್ ಸಿಗುತ್ತಿಲ್ಲ’ ಎಂದಿದ್ದಾರೆ.
ಅಂದ ಹಾಗೆ ರಜನಿಕಾಂತ್ ಇತ್ತೀಚೆಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಡಿಎಂಕೆ ಹಿರಿಯ ನಾಯಕರ ಬಗ್ಗೆ ಮಾತನಾಡಿದ್ದರು. ಈ ವೇಳೆ ರಜನಿಕಾಂತ್ ಅವರು ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರನ್ನು ಹೊಗಳಿದ್ದರು. ಪಕ್ಷದ ಹಳೆಯ ತಲೆಗಳನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದೀರಿ ಎಂದು ಸ್ಟಾಲಿನ್ ಗೆ ಹೇಳಿದ್ದರು. ಹಳೆಯ ನಾಯಕರನ್ನು ಹಳೆಯ ವಿದ್ಯಾರ್ಥಿಗಳಿಗೆ ಹೋಲಿಕೆ ಮಾಡಿದ್ದರು. ಹೊಸ ನಾಯಕರು ಬರೋಕೆ ಹಳೆಯ ನಾಯಕರು ಅವಕಾಶ ಮಾಡಿಕೊಡಲ್ಲ ಎಂದಿದ್ದರು. ಇದು ದುರೈ ಮುರುಗನ್ ಅವರಿಗೆ ಇಷ್ಟ ಆಗಿಲ್ಲ. ಹೀಗಾಗಿ ಅವರದ್ದೇ ಸ್ಟೈಲ್ನಲ್ಲಿ ದೊರೈ ಉತ್ತರ ನೀಡಿದ್ದಾರೆ.
ರಜನಿಕಾಂತ್ ಹಾಗೂ ಮುರುಗನ್ ಮಧ್ಯೆ ಎಲ್ಲವೂ ಸರಿ ಇದೆ ಎನ್ನಲಾಗಿದೆ. ದೊರೈ ಮುರುಗನ್ ಏನೇ ಹೇಳಿದರೂ ನನಗೆ ತೊಂದರೆ ಇಲ್ಲ ಎಂದು ರಜನಿಕಾಂತ್ ಹೇಳಿದ್ದಾರಂತೆ. ಅದೇ ರೀತಿ ರಜನಿಕಾಂತ್ ಬಗ್ಗೆ ದೊರೈ ಮುರುಗನ್ ಯಾವುದೇ ದ್ವೇಷ ಇಲ್ಲ ಎಂದು ಹೇಳಲಾಗಿದೆ.
ರಜನಿಕಾಂತ್ ಅವರು ‘ವೆಟ್ಟೈಯನ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರ ಅಕ್ಟೋಬರ್ 10ರಂದು ರಿಲೀಸ್ ಆಗಲಿದೆ. ಟಿಜಿ ಜ್ಞಾನವೇಲ್ ಅವರು ಇದರಲ್ಲಿ ನಟಿಸುತ್ತಿದ್ದಾರೆ. ಅಮಿತಾಭ್ ಬಚ್ಚನ್, ರಾಣಾ ದಗ್ಗುಬಾಟಿ, ಫಹಾದ್ ಫಾಸಿಲ್ ಮೊದಲಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಅವರು ‘ಕೂಲಿ’ ಚಿತ್ರದಲ್ಲೂ ರಜನಿಕಾಂತ್ ಬ್ಯುಸಿಯಾಗಿದ್ದು ಈ ಸಿನಿಮಾದಲ್ಲಿ ಕನ್ನಡದ ನಟ, ನಟಿಯರು ಬಣ್ಣ ಹಚ್ಚುತ್ತಿದ್ದಾರೆ.