ಇರಾನ್ ಸರ್ಕಾರದ ವಕ್ತಾರರಾಗಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರನ್ನು ನೇಮಿಸಲಾಗಿದೆ. ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಮಸೂದ್ ಪೆಜೆಷ್ಕಿಯಾನ್ ಸರಕಾರದ ವಕ್ತಾರರಾಗಿ ಫತೇಮೆಹ್ ಮೊಹಜೆರಾನಿ ಅವರನ್ನು ನೇಮಕ ಮಾಡಲಾಗಿದೆ. ಕ್ಯಾಬಿನೆಟ್ ಸಭೆಯಲ್ಲಿ ಅಧ್ಯಕ್ಷ ಪೆಜೆಶ್ಕಿಯಾನ್ ಈ ಅವರು ಮಸೂದ್ ಪೆಜೆಷ್ಕಿಯಾನ್ ಅವರನ್ನುನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
54 ವರ್ಷದ ಮೊಹಜೆರಾನಿ ಎಡಿನ್ ಬರ್ಗ್ ವಿಶ್ವವಿದ್ಯಾಲಯದಿಂದ ಡಾಕ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಪದವಿಧರೆಯಾಗಿದ್ದು, ಈ ಹಿಂದಿನ 11ನೇ ಸರ್ಕಾರದಲ್ಲಿ ಶರಿಯಾತಿಯ ತಾಂತ್ರಿಕ ಮತ್ತು ವೃತ್ತಿಪರ ತರಬೇತಿ ವಿಶ್ವವಿದ್ಯಾಲಯದ (ಮಹಿಳೆಯರಿಗಾಗಿ) ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. 2017 ರಲ್ಲಿ ಆಗಿನ ಶಿಕ್ಷಣ ಸಚಿವ ಸಯ್ಯದ್ ಮೊಹಮ್ಮದ್ ಬಟ್ ಹೈ ಅವರು ಮೊಹಜೆರಾನಿ ಅವರನ್ನು ಸೆಂಟರ್ ಫಾರ್ ಬ್ರಿಲಿಯಂಟ್ ಟ್ಯಾಲೆಂಟ್ಸ್ ಮುಖ್ಯಸ್ಥರನ್ನಾಗಿ ನೇಮಿಸಿದ್ದರು. ಮೊಹಜೆರಾನಿ ಶಿಕ್ಷಣ ಸಚಿವಾಲಯದಲ್ಲಿ ಇನ್ನೂ ಹಲವಾರು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಮೊಹಜೆರಾನಿ ಮಾತ್ರವಲ್ಲದೆ ದೇಶದ ಕೆಲ ಪ್ರಮುಖ ಹುದ್ದೆಗಳಿಗೆ ಕೂಡ ಮಹಿಳೆಯರನ್ನು ನೇಮಿಸಲಾಗಿದೆ. ಅಧ್ಯಕ್ಷ ಪೆಜೆಷ್ಕಿಯಾನ್ ಕಳೆದ ವಾರ ಶಿನಾ ಅನ್ಸಾರಿ ಅವರನ್ನು ಇರಾನ್ನ ಉಪಾಧ್ಯಕ್ಷರಾಗಿ ಮತ್ತು ಪರಿಸರ ವಿಭಾಗದ ಮುಖ್ಯಸ್ಥರನ್ನಾಗಿ ನೇಮಿಸಿದ್ದರು. ಶಿನಾ ಅನ್ಸಾರಿ ಪರಿಸರ ಸೇವೆ ಮತ್ತು ತ್ಯಾಜ್ಯ ನಿರ್ವಹಣೆ, ಆರ್ ಸಿಆರ್ಎ, ಸುಸ್ಥಿರ ಅಭಿವೃದ್ಧಿ ಮತ್ತು ಪರಿಸರ ಅನುಸರಣೆಯಲ್ಲಿ ಅನುಭವಿ ಪರಿಸರ ತಜ್ಞೆಯಾಗಿದ್ದಾರೆ.
ವಿಜ್ಞಾನ ಮತ್ತು ಸಂಶೋಧನಾ ವಿಶ್ವವಿದ್ಯಾಲಯದಿಂದ ಪರಿಸರ ನಿರ್ವಹಣೆಯಲ್ಲಿ ಪಿಎಚ್ ಡಿ ಪಡೆದಿರುವ ಶಿನಾ ಪ್ರಸ್ತುತ ಟೆಹ್ರಾನ್ ಪುರಸಭೆಯ ವಾಯು ಗುಣಮಟ್ಟ ನಿಯಂತ್ರಣ ಕೇಂದ್ರದಲ್ಲಿ ಸಲಹೆಗಾರರಾಗಿದ್ದರು ಮತ್ತು ಈ ಹಿಂದೆ ಪುರಸಭೆಯಲ್ಲಿ ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿಯ ಮುಖ್ಯಸ್ಥರಾಗಿದ್ದರು ಮತ್ತು ಪರಿಸರ ಇಲಾಖೆಯಲ್ಲಿ ಸಮಗ್ರ ಪರಿಸರ ಮಾಲಿನ್ಯ ಮೇಲ್ವಿಚಾರಣಾ ಬ್ಯೂರೋದ ಸಾಮಾನ್ಯ ನಿರ್ದೇಶಕರಾಗಿದ್ದರು.
ಪೆಜೆಶ್ಕಿಯಾನ್ ಅವರ ಕ್ಯಾಬಿನೆಟ್ ಇರಾನ್ನ ಎರಡನೇ ಮಹಿಳಾ ಸಚಿವೆಯನ್ನು ಹೊಂದಿದ್ದು, ಫರ್ಜಾನೆ ಸಾದೆಕ್ ಮಾಲ್ವಾಜಾರ್ಡ್ ಅವರನ್ನು ರಸ್ತೆ ಮತ್ತು ನಗರಾಭಿವೃದ್ಧಿ ಸಚಿವರನ್ನಾಗಿ ನೇಮಿಸಲಾಗಿದೆ. ಅವರು ಜನವರಿ 2019 ರಿಂದ ಜುಲೈ 2023 ರವರೆಗೆ ನಗರ ಯೋಜನೆ ಮತ್ತು ವಾಸ್ತುಶಿಲ್ಪದ ಉಪ ಸಚಿವರಾಗಿದ್ದರು.