ಬೆಂಗಳೂರು: ರೈಲ್ವೆ ಪ್ರಯಾಣಿಕರಿಗೆ ಕಿರುಕುಳ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲ್ವೆ ಡೆಪ್ಯುಟಿ ಸಿಟಿಐ ಅನ್ನು ದಂಡು ರೈಲ್ವೇ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಸಂತೋಷ್ ಕುಮಾರ್ ಬಂಧಿತ ರೈಲ್ವೆ ಡೆಪ್ಯೂಟಿ ಸಿಟಿಐ ಎಂದು ಗುರುತಿಸಲಾಗಿದೆ. ಬಂಧಿತ ಸಂತೋಷ್ ಕುಮಾರ್, ಟಿಕೆಟ್ ಚೆಕಿಂಗ್ ವೇಳೆ ಹಲವು ಪ್ರಯಾಣಿಕರಿಗೆ ಕಿರುಕುಳ ಕೊಟ್ಟಿದ್ದರು. ಈ ಕುರಿತು ಹಲವರು ಟ್ವಿಟರ್ ನಲ್ಲಿ ಪ್ರಯಾಣಿಕರು ದೂರು ನೀಡಿದ್ದರು.
ಅಲ್ಲದೇ ಕಳೆದ 14 ರಂದು ಉತ್ತರ ಭಾರತ ಮೂಲದ ಮಹಿಳೆಯೊಂದಿಗೆ ಅಧಿಕಾರಿ ಕಿರಿಕ್ ಮಾಡಿದ್ದಾನೆ. ಕುಡಿದು ಮಹಿಳೆಯೊಂದಿಗೆ ಆರೋಪಿ ಕಿರಿಕ್ ಮಾಡಿದ್ದಾನೆ. ಈ ಕುರಿತು ದಂಡು ರೈಲ್ವೆ ಪೊಲೀಸರಿಗೆ ಪಿಯಾಲಿ ಬರ್ಮನ್ ಎಂಬ ಮಹಿಳೆ ದೂರು ನೀಡಿದ್ದು, ದೂರಿನ ಅನ್ವಯ ತನಿಖೆ ಕೈಗೊಂಡ ಪೊಲೀಸರು, ಆರೋಪಿ ಸಂತೋಷ್ ಕುಮಾರ್ ನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.