ಕನ್ನಡ ಚಿತ್ರರಂಗದ ಹಿರಿಯ ನಟ ಟೆನ್ನಿಸ್ ಕೃಷ್ಣ ಕಳೆದ ಮೂರ್ನಾಲ್ಕು ದಶಕಗಳಿಂದ ಹಾಸ್ಯ ಪಾತ್ರಗಳ ಮೂಲಕ ಜನರನ್ನು ರಂಜಿಸಿದ್ದಾರೆ. ಆದರೆ, ಇತ್ತೀಚೆಗೆ ಹಿರಿಯ ಹಾಸ್ಯ ನಟ ಟೆನ್ನಿಸ್ ಕೃಷ್ಣ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಈಗಾಗಲೇ ನೀಡಿದ ಹಲವು ಸಂದರ್ಶನಗಳಲ್ಲಿ ಅವಕಾಶಗಳು ಸಿಗುತ್ತಿಲ್ಲ ಎಂದು ನಟ ಹೇಳಿಕೊಂಡಿದ್ದರು.
ಇದೀಗ ನಟ ಟೆನ್ನಿಸ್ ಕೃಷ್ಣ ಇತ್ತೀಚೆಗೆ ಮದುವೆಯಾದ ತರುಣ್ ಸುಧೀರ್ ತಮ್ಮನ್ನು ಮದುವೆಗೆ ಆಹ್ವಾನಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಹಿರಿಯ ನಟ ಸುಧೀರ್ ಅಗಲಿದ ಬಳಿಕ ಅವರ ಕಂಪನಿಗೆ ಕೆಲಸ ಮಾಡಿದ್ದೆ. ಆ ಸಂದರ್ಭದಲ್ಲಿ ಸುಧೀರ್ ಅವರ ಪತ್ನಿ ನಾಟಕ ಕಂಪನಿ ಉಳಿಸಿಕೊಳ್ಳಲು ಫ್ರೀ ಇದ್ದಾಗ ಡೇಟ್ ಕೊಡುವಂತೆ ಕೇಳಿಕೊಂಡಿದ್ದರು. ಅವರು ಕೊಟ್ಟಷ್ಟು ಸಂಭಾವನೆ ತೆಗೆದುಕೊಂಡಿದ್ದೇನೆ. ನಾನು ಡಿಮ್ಯಾಂಡ್ ಕೂಡ ಮಾಡಿಲ್ಲ. ಇವತ್ತು ಅವರ ಇಬ್ಬರು ಮಕ್ಕಳು ಕೂಡ ದೊಡ್ಡ ನಿರ್ದೇಶಕರಾಗಿದ್ದಾರೆ. ನನಗೆ ಖುಷಿ ಆಯ್ತು ಎಂದಿದ್ದಾರೆ.
ಮುಂದುವರೆದು ಮಾತನಾಡಿದ ಅವರು, ನಂದ ಕಿಶೋರ್ ಹಾಗೂ ತರುಣ್ ಸುಧೀರ್ ನಿರ್ದೇಶಿಸಿದ ಸಿನಿಮಾಗಳಲ್ಲಿ ಅವಕಾಶ ಕೊಟ್ಟಿಲ್ಲ. ಹಾಗೇ ತರುಣ್ ಸುಧೀರ್ ಮದುವೆಗೂ ಕರೆದಿಲ್ಲ ಎಂದು ಹೇಳಿಕೊಂಡಿದ್ದಾರೆ. “ಆದರೆ, ಅವರು ನನ್ನನ್ನು ಸಿನಿಮಾಗೆ ಕರೆದಿಲ್ಲ. ಅದೇ ನನ್ನ ಪ್ರಶ್ನೆ. ಅವರಿಗೆ ಶರಣ್, ಚಿಕ್ಕಣ್ಣ ಆತ್ಮೀಯರಾಗಿದ್ದರು. ಈ ಪಾತ್ರ ಅವರಿಗೆ ಸೂಟ್ ಆಗಿರಬಹುದೆಂದು ಹಾಕಿಕೊಂಡಿರಬಹುದು. ನಾನು ಇಷ್ಟು ಮಾತಾಡಿದ್ದು ಸುಳ್ಳು ಅಂತ ಹೇಳಲಿ. ದೇವರು ಮುಟ್ಟಿ ಆಣೆ ಮಾಡಲಿ. ಮದುವೆಗೂ ಕರೆದಿಲ್ಲ. ಎಲ್ಲರೂ ಕೇಳಿದರು ಯಾಕೆ ಮದುವೆ ಬರಲಿಲ್ಲ ಅಂತ. ಕರೆದರೆ ತಾನೆ ಬರೋದು ಅಂತ ಹೇಳಿದೆ.” ಎಂದು ಬೇಸರ ವ್ಯಕ್ತಪಡಿಸಿದರು.