ಬೆಂಗಳೂರು :- ಸಿಲಿಕಾನ್ ಸಿಟಿ ಬೆಂಗಳೂರಿನ ಪಿಜಿಗಳಿಗೆ ಪಾಲಿಕೆ ಬಿಗ್ ಶಾಕ್ ನೀಡಿದೆ. ಸೆಪ್ಟೆಂಬರ್ 15ರೊಳಗೆ ಗೈಡ್ ಲೈನ್ ಅಳವಡಿಸದಿದ್ರೆ ಲೈಸೆನ್ಸ್ ಕ್ಯಾನ್ಸಲ್ ಮಾಡಲಾಗುತ್ತದೆ. ಇತ್ತೀಚೆಗಷ್ಟೆ ಪಿಜಿಗಳಿಗೆ ಪಾಲಿಕೆ ಗೈಡ್ ಲೈನ್ ಬಿಡುಗಡೆ ಮಾಡಿತ್ತು.
ಗೈಡ್ ಲೈನ್ಸ್ ಅಳವಡಿಕೆಗೆ ಸೆಪ್ಟೆಂಬರ್ 15ರ ಗಡುವು ನೀಡಲಾಗಿತ್ತು.
ಗಡುವು ಮೀರಿದ್ರೆ ಅನಧಿಕೃತ ಅಂತಾ ಪರಿಗಣಿಸಿ ಲೈಸೆನ್ಸ್ ರದ್ದು ಮಾಡಲಾಗಿದೆ. ಅನಧಿಕೃತ ಪಿಜಿಗಳ ಮಾಹಿತಿಯನ್ನೂ ಪಾಲಿಕೆ ಕಲೆಹಾಕ್ತಿದ್ದು, ಪಾಲಿಕೆಯಲ್ಲಿ ಈವರೆಗೆ 2 ಸಾವಿರ ಪಿಜಿಗಳಿಗೆ ಮಾತ್ರ ಲೈಸೆನ್ಸ್ ವಿತರಣೆ ಮಾಡಲಾಗಿದೆ.
ನಗರದಲ್ಲಿ 25 ಸಾವಿರಕ್ಕೂ ಅಧಿಕ ಪಿಜಿಗಳ ಕಾರ್ಯಾಚರಣೆ ಮಾಡಲಾಗಿದ್ದು, ಅನಧಿಕೃತ ಪಿಜಿಗಳಿಗೆ ಬಿಸಿಮುಟ್ಟಿಸೋದಕ್ಕೂ ಪಾಲಿಕೆ ಪ್ಲಾನ್ ಮಾಡಿಕೊಂಡಿದೆ. ಸೆಪ್ಟೆಂಬರ್ 15ರೊಳಗೆ ಲೈಸೆನ್ಸ್ ಪಡೆಯಲು ತಾಕೀತು ಮಾಡಲಾಗಿದೆ.
ಇಲ್ಲಾ ಅಂದ್ರೆ ಪಿಜಿಗಳನ್ನ ಬಂದ್ ಮಾಡುವ ಎಚ್ಚರಿಕೆಯನ್ನು ಬಿಬಿಎಂಪಿ ವಿಶೇಷ ಆಯುಕ್ತ ಸೂರಳ್ಕರ್ ವಿಕಾಸ್ ಕಿಶೋರ್ ರಿಂದ ಎಚ್ಚರಿಕೆ ನೀಡಲಾಗಿದೆ.