ಬೆಂಗಳೂರು:- ಖರ್ಗೆ ಕುಟುಂಬಕ್ಕೆ ಸಿಎ ಸೈಟ್ ನೀಡಿರುವ ವಿಚಾರವಾಗಿ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಖರ್ಗೆ ಕುಟುಂಬಕ್ಕೆ ಸಿಎ ಸೈಟ್ ನೀಡಿರುವ ವಿಚಾರ ರಾಜ್ಯಪಾಲರ ಅಂಗಳದಿಂದ ಅದಕ್ಕೂ ಸೂಚನೆ ಬಂದರೆ ಮತ್ತೆ ಹೋರಾಟ ಮಾಡಲಾಗುವುದು. ಏನು ಮಾಡುವುದಕ್ಕೆ ಆಗುವುದಿಲ್ಲ.ಹೋರಾಟ ನಡೆಯುತ್ತದೆ. ಏನು ಬರುತ್ತದೆ, ಏನು ಕೊಟ್ಟಿದ್ದಾರೆ ನೋಡೋಣ. ಲೀಗಲ್ ಬ್ಯಾಟಲ್ ಅನಿವಾರ್ಯವಾದರೆ ಮಾಡಲೇಬೇಕಾಗುತ್ತದೆ ಎಂದು ತಿಳಿಸಿದ್ದಾರೆ
ಹಿಂದಿನ ಇತಿಹಾಸವನ್ನು ನೋಡಬೇಕಾಗುತ್ತದೆ. ಹಿಂದಿನ ಸರ್ಕಾರಗಳು ಬೆಂಗಳೂರು ಸುತ್ತಮುತ್ತ ಅವರ ಸಂಸ್ಥೆಗಳಿಗೆ ಜಮೀನು ನೀಡಿದ್ದಾರೆ. ರಾಜ್ಯಾದ್ಯಂತ ಜಮೀನು ನೀಡಿದ್ದಾರೆ. ಚರ್ಚೆ ಆಗೋದಾದ್ರೆ, ತನಿಖೆ ಆಗೋದಾದ್ರೆ ಎಲ್ಲರದ್ದೂ ಆಗಲಿ. ಕೇವಲ ಖರ್ಗೆಯವರ ವಿಚಾರ ಮಾತ್ರ ಯಾಕೆ ಚರ್ಚೆ? ಎಲ್ಲರದೂ ಚರ್ಚೆ ಆಗಲಿ. ಕಳೆದ ಹತ್ತು ವರ್ಷಗಳಲ್ಲಿ ಯಾರ್ಯಾರಿಗೆ ಸಿಎ ಸೈಟುಗಳನ್ನು ಕೊಟ್ಟಿದ್ದಾರೆ? ಎಲ್ಲವೂ ಚರ್ಚೆಯಾಗಲಿ. ಒಬ್ಬರಿಗೆ ಮಾತ್ರ ಮಹತ್ವ ಕೊಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರಿ ಜಮೀನನ್ನ ಸಾವಿರಾರು ಎಕರೆ ಕೊಟ್ಟಿದ್ದಾರೆ ಇತಿಹಾಸದಲ್ಲಿ. ಹಿಂದಿನದ್ದು ಬಿಟ್ಟು ಬಿಡುವುದು, ಈಗಿನದ್ದು ಮಾತ್ರ ಚರ್ಚೆ ಮಾಡುವುದು ಸರಿಯಾಗುವುದಿಲ್ಲ. ಚರ್ಚೆ ಆಗೋದಾದರೆ ಎಲ್ಲವೂ ಚರ್ಚೆಯಾಗಲಿ. ಹತ್ತು ವರ್ಷಗಳಲ್ಲಿ ಹಲವಾರು ಮಂದಿ ಸೈಟುಗಳನ್ನು ಪಡೆದುಕೊಂಡಿದ್ದಾರೆ. ಅವರವರ ಸರ್ಕಾರ ಇದ್ದಾಗ ಅವರ ಕುಟುಂಬಸ್ಥರೇ ಹಲವಾರು ಮಂದಿ ಪಡೆದುಕೊಂಡಿದ್ದಾರೆ. ಆ ಬಗ್ಗೆಯೂ ತನಿಖೆಯಾಗಲಿ, ಚರ್ಚೆಯಾಗಲಿ. ಎಲ್ಲ ಪಕ್ಷದ ಎಲ್ಲ ರಾಜಕಾರಣಿಗಳು ತೆಗೆದುಕೊಂಡಿದ್ದಾರೆ. ಯಾರಿಗೆ ಸೈಟ್ ನೀಡಬೇಕು ಎಂಬುದು, ಹಂಚಿಕೆ ಮಾಡುವ ಅಧಿಕಾರ ಸಂಬಂಧಪಟ್ಟ ಅಥಾರಿಟಿಯದ್ದು. ಮೂಡಾ ಆದ್ರೆ ಮೂಡಾ, ಬಿಡಿಎ ಆದ್ರೆ ಬಿಡಿಎ. ಸ್ಥಳೀಯ ಸಂಸ್ಥೆಯವರಿಗೆ ಅಧಿಕಾರ ಇರುತ್ತೆ, ಅಧಿಕಾರ ಚಲಾಯಿಸಿರಬಹುದು ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯಪಾಲರ ಬಳಿಗೆ ಖರ್ಗೆ ವಿಚಾರ ಹೋಗಿದೆ. ರಾಜ್ಯಪಾಲರು ಏನ್ ಮಾಡ್ತಾರೆ ಕಾದು ನೋಡೋಣ. ಗವರ್ನರ್ ಏನು ಆದೇಶ ಕೊಡ್ತಾರೆ ನಂತರ ನಿರ್ಧಾರ ಮಾಡೋಣ. ವಿಶೇಷ ಅಧಿವೇಶನ ಕರೆಯೋ ಅವಶ್ಯಕತೆ ಏನಿದೆ? ಮೊನ್ನೆ ಅಧಿವೇಶನ ಕರೆದಾಗ ಬರಿ ಗದ್ದಲ ಗದ್ದಲಾಗಿ ಕೊನೆಗೊಂಡಿತು. ರಾಜ್ಯಪಾಲರನ್ನು ವಾಪಸ್ ಕಳಿಸಿ ಎಂಬ ಯಾವ ಉದ್ದೇಶ ಸರ್ಕಾರಕ್ಕೆ ಇಲ್ಲ. ಡಿಸೆಂಬರ್ನಲ್ಲಿ ಅಧಿವೇಶನ ನಡೆಯುತ್ತದೆ ಎಂದು ತಿಳಿಸಿದ್ದಾರೆ.