ಬಾಗಲಕೋಟೆ:- ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ಪಟ್ಟಣದ ಆರಕ್ಷಕ ಠಾಣೆಯ ಆವರಣದಲ್ಲಿ ಸಾರ್ವಜನಿಕರಿಗೆ ಗಣೇಶ ಹಬ್ಬದ ಪ್ರಯುಕ್ತ ಶಾಂತಿ ಸಭೆಯನ್ನ ಏರ್ಪಡಿಸಲಾಗಿತ್ತು
ಈ ಸಂದರ್ಭದಲ್ಲಿ ಜಮಖಂಡಿ ಆರಕ್ಷಕ ಠಾಣೆಯ dysp ಶಾಂತವೀರ ಬಿ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಗಣೇಶ ಹಬ್ಬವನ್ನು ಎಲ್ಲೆಡೆ ಆಚರಿಸುತ್ತಿದ್ದಾರೆ.
ಆಚರಿಸುವಾಗ ಸರ್ಕಾರದ ಕಾನೂನಿನ ಅಡಿಯಲ್ಲಿ ಬರುವ ಎಲ್ಲಾ ಸೂಚನೆಗಳನ್ನು ಪಾಲಿಸಬೇಕು.
ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ನಡೆದುಕೊಳ್ಳಬೇಕು. ಅಸಭ್ಯವಾಗಿ ವರ್ತಿಸಿದವರನ್ನು ಹಾಗೂ ಕಾನೂನುಬಾಹಿರ ಚಟುವಟಿಕೆಗಳನ್ನು ಮಾಡಿದವರನ್ನು ನಿರ್ದಾಕ್ಷಣವಾಗಿ ಅವರ ವಿರುದ್ಧ ಕ್ರಮ ಜರಗಿಸಲಾಗುವುದು. ದಯಮಾಡಿ ಆಚರಿಸುವಂತಹ ಹಬ್ಬವನ್ನು ಶಾಂತಿಯುತವಾಗಿ.. ಅರ್ಥಗರ್ಭಿತವಾಗಿ ಆಚರಿಸಲು ಮನವಿ ಮಾಡಿದರು.
ಇತ್ತೀಚಿನ ದಿನಮಾನಗಳಲ್ಲಿ ವಾಯು ಮಾಲಿನ್ಯ ಮತ್ತು ಪರಿಸರ ಹಾಳಾಗಿ ಹೋಗುವುದನ್ನು ನಾವು ಕಂಡಿದ್ದೇವೆ ಹಾಗಾಗಿ ಎಲ್ಲರೂ ಪರಿಸರ ಸ್ನೇಹಿ ಗಣಪತಿಯನ್ನು ಕೂಡಿಸಿ.
ನಮ್ಮ ಭಾರತ ದೇಶದ ಪರಂಪರೆಯ ಸಂಸ್ಕೃತಿಕ ಕಲೆ ಸಾಹಿತ್ಯ ಜಾನಪದಗಳಿಂದ ಕೂಡಿಕೊಂಡಿದೆ.
ಸ್ಥಳೀಯ ಮಟ್ಟದ ಕಲಾತಂಡಗಳಿಂದ ವಾದ್ಯ ಮೇಳದೊಂದಿಗೆ ಗಣಪತಿಯನ್ನು ಕೂಡಿಸಿ.
ವಿಪರೀತ ಡಿಜೆ ಸೌಂಡ್ ಮದ್ದು ಗುಂಡುಗಳಿಂದ ಪರಿಸರ ಮತ್ತು ವಾಯು ಮಾಲಿನ್ಯ ಹಾಳಾಗುತ್ತಿದೆ ನಮ್ಮ ಯುವಕರು ಇದನ್ನು ಗಮನದಲ್ಲಿ ಇಟ್ಟುಕೊಂಡು ಸರಳ ಮತ್ತು ಅದ್ದೂರಿಯಿಂದ ಗಣೇಶ್ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ದಿನನಿತ್ಯ ಪೂಜೆಗಳನ್ನು ಸಲ್ಲಿಸಿ, ನಂತರ ವಿಸರ್ಜನೆ ಮಾಡಬೇಕೆಂದು ಮನವಿ ಮಾಡಿಕೊಂಡರು.
ಪೊಲೀಸರ ಜೊತೆ ಸಾರ್ವಜನಿಕರ ಸಹಕಾರ ಅಗತ್ಯ ಗಣೇಶ್ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ ನಂತರ ಸಂಘದ ಸ್ವಯಂಸೇವಕರು ಕಡ್ಡಾಯವಾಗಿ ಇರಲೇಬೇಕು.
ನಿಮ್ಮ ಜೊತೆ ನಮ್ಮ ಪೊಲೀಸ್ ಇಲಾಖೆಯು ಸಹಕಾರವಾಗಿರುತ್ತದೆ ಮತ್ತು ಪೊಲೀಸ್ ಮಿತ್ರ ಕಾಡುಗಳನ್ನ ನೀಡುತ್ತೇವೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರಬಕವಿ ಬನಹಟ್ಟಿ ದಂಡಾಧಿಕಾರಿಗಳಾದ ಗಿರೀಶ ಸ್ವದಿ.ಬನಹಟ್ಟಿ ಸಿ ಪಿ ಐ ಸಂಜೀವ ಬಳೆಗಾರ. ಶಾಂತಾ ಹಳ್ಳಿ. ಕೆಇಬಿ ಅಧಿಕಾರಿ ಪ್ರಭಾಕರ ಸತ್ತಿ. ಹಿರಿಯರಾದ ಸಿದ್ದನಗೌಡ ಪಾಟೀಲ. ಶ್ರೀಶೈಲ ದವಾಡಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಜನಪ್ರತಿನಿಧಿಗಳು.. ಸಾರ್ವಜನಿಕರು ..ಆರಕ್ಷಕ ಠಾಣೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು…