ಬೆಂಗಳೂರು: ಶಾಲಾ ಮಕ್ಕಳು ಕಟ್ಟಿದ ಪರೀಕ್ಷೆ ಶುಲ್ಕವನ್ನು ಗ್ಯಾರೆಂಟಿ ಯೋಜನೆಗಳಿಗೆ ಬಳಕೆ ಮಾಡುತ್ತಿದ್ದು ಬಡ ವಿದ್ಯಾರ್ಥಿಗಳು ಪರೀಕ್ಷೆಗೆ ಕಟ್ಟಿದ ಹಣವೂ ಬಿಡ್ತಿಲ್ವಾ ಈ ಗ್ಯಾರೆಂಟಿ ಸರ್ಕಾರ ಈ ಬಗ್ಗೆ ಸಂಶಯ ವ್ಯಕ್ತಪಡಿಸಿದ ಕೃಪಾ ಸಂಘಟನ
ರಾಷ್ಟ್ರೀಯ ಪ್ರತಿಭಾ ಶೋಧ ಪರೀಕ್ಷೆಗಾಗಿ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ್ದ ಹಣ ಸರ್ಕಾರವೇ ಬಳಕೆ ಮಾಡಿಕೊಳ್ಳುತ್ತಿದ್ದು ಶುಲ್ಕ ರೂಪದಲ್ಲಿ ಸಂಗ್ರಹಿಸಲಾದ ಹಣ ಗ್ಯಾರಂಟಿಗಳಿಗೆ ಬಳಕೆ ಮಾಡಿಕೊಳ್ಳುತ್ತಿದೆ.
2021 22ನೇ ಸಾಲಿನಲ್ಲಿ ಪ್ರತಿಭಾ ಶೋಧ ಪರೀಕ್ಷೆ ನಿಗದಿ ಮಾಡಿದ್ದ ಶಿಕ್ಷಣ ಇಲಾಖೆ ರಾಜ್ಯದ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಂದ ಹಣ ಸಂಗ್ರಹ ಒಟ್ಟು ರೂ 2,66,72,717 ಗಳನ್ನ ಹಣ ಸಂಗ್ರಹ ಮಾಡಿದ್ದ ಇಲಾಖೆ
ಆದ್ರೆ ಪರೀಕ್ಷೆ ರದ್ದಾಗಿ ಕಳೆದ ಮೂರು ವರ್ಷ ಕಳೆದರೂ ಪರೀಕ್ಷೆಯೂ ಇಲ್ಲ ಇತ್ತ ಮಕ್ಕಳು ಕಟ್ಟಿದ ಪರೀಕ್ಷಾ ಶುಲ್ಕವೂ ವಾಪಸ್ ಇಲ್ಲಅಧಿಕಾರಿಗಳನ್ನ ಕೇಳಿದ್ರೆ ಪರೀಕ್ಷೆ ರದ್ದಾಗಿದೆ ಆದ್ರೆ ಹಣ ವಾಪಸ್ ಕೊಡೋಕೆ ಸಾಧ್ಯವಿಲ್ಲ ಅಂತಿದ್ದಾರೆಮಕ್ಕಳು ಕಟ್ಟಿದ ಪರೀಕ್ಷಾ ಶುಲ್ಕವನ್ನ ಸರ್ಕಾರಕ್ಕೆ ಕೊಟ್ಟಿದ್ದೇವೆ ಎಂದು ಹೇಳುತ್ತಿರುವ ಶಿಕ್ಷಣ ಇಲಾಖೆ
ಆ ಹಣವು ಸರ್ಕಾರದ ಉಚಿತ ಯೋಜನೆಗಳಿಗೆ ನೀಡಲಾಗಿದೆ ಎಂಬ ಸಂಶಯ ವ್ಯಕ್ತಪಡಿಸಿದ ಕೃಪಾ ಸಂಘಟನೆ ಇಂತಹ ಕೆಟ್ಟ ಹೆಸರು ಸರ್ಕಾರಕ್ಕೆ ಬರೋಕು ಮುಂಚೆ ಈ ಹಣವನ್ನು ತಕ್ಷಣವೇ ಮಕ್ಕಳ ಖಾತೆಗೆ ಹಿಂದಿರುಗಿಸುವಂತೆ ಒತ್ತಾಯ ಮಾಡಲಾಗಿದೆ.