ಸ್ಯಾಂಡಲ್ ವುಡ್ ಸ್ಟಾರ್ ಡೈರೆಕ್ಟರ್ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮಂಥೆರೋ ಮದುವೆಯಾದ ಖುಷಿಯಲ್ಲಿದ್ದಾರೆ. ಮದುವೆಯಾಗಿ ತಿಂಗಳು ಕಳೆಯೋದ್ರಲ್ಲೇ ಈ ಮುದ್ದಾದ ಜೋಡಿ ಮಂಗಳೂರಿನಲ್ಲಿ ಅದ್ದೂರಿ ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಿದೆ.
ತರುಣ್ ಸುಧೀರ್ ಹಾಗೂ ಸೋನಲ್ ಕೈ ಕೈ ಹಿಡಿದು ಸುತ್ತಾಡುತ್ತಿದ್ದಾರೆ. ಅಂತೆಯೇ ಖ್ಯಾತ ನಿರೂಪಕಿ ಅನುಶ್ರೀ ಅವರ ಯುಟ್ಯೂಬ್ ಚಾನಲ್ ಗೂ ಒಟ್ಟಿಗೆ ಸಂದರ್ಶನ ನೀಡಿದ್ದು ಈ ವೇಳೆ ತಮ್ಮ ಜೀವನದ ಹಲವಾರು ವಿಷಯಗಳನ್ನ ಹಂಚಿಕೊಂಡಿದ್ದಾರೆ.
ಸೋನಲ್ ಅವರನ್ನ ಮೊದಲು ನೋಡಿರೋದು ಎಲ್ಲಿ ಅನ್ನೋ ವಿಷಯವನ್ನ ತರುಣ್ ಹೇಳಿಕೊಂಡಿದ್ದಾರೆ. ಚಿಕಣ್ಣನ ಮನೆ ಹುಡುಕಿಕೊಂಡು ಹೋಗಿದ್ದೆ. ಆದರೆ, ಆ ಮನೆಯಲ್ಲಿ ಸೋನಲ್ ಆ್ಯಂಡ್ ಫ್ಯಾಮಿಲಿ ಇತ್ತು. ಆಗ ಅವರೇ ಚಿಕ್ಕಣ್ಣನ ಮನೆ ಹಿಂದೆ ಇದೆ ಅಂತಲೇ ಜೊತೆಗೆದ್ದವರು ಹೇಳಿದ್ದರು ಅಂತಲೂ ತರುಣ್ ಹೇಳಿದ್ದರು.
ತರುಣ್ ಸುಧೀರ್ ಮತ್ತು ಸೋನಲ್ ಮದುವೆ ಎರಡು ಕುಟುಂಬಗಳು ಒಪ್ಪಿಗೆಯ ಮೇರೆಗೆ ನಡೆದಿದೆ. ದರ್ಶನ್ ಮಂಗಳೂರಿಗೆ ಹೋದಾಗ ಸೋನಲ್ ತಾಯಿಗೆ ಹೇಳಿದ್ರು. ತರುಣ್ ಸುಧೀರ್ ತುಂಬಾ ಒಳ್ಳೆ ಹುಡುಗ ಅಂತಲೇ ಹೇಳಿದ್ದರು. ಇದರ ಮಧ್ಯೆ ಚಿಕ್ಕಣ್ಣ ಕೂಡ ಸೋನಲ್ ಕುರಿತು ಮಾತನಾಡಿದ್ದರು. ತರುಣ್ ಸುಧೀರ್ ಮತ್ತು ಸೋನಲ್ ಮದುವೆ ಮ್ಯಾಟರ್ನಲ್ಲಿ ಚಿಕ್ಕಣ್ಣ ಸಹ ಭಾಗಿಯಾಗಿದ್ದರು ಎಂದು ತರುಣ್ ಹೇಳಿದ್ದಾರೆ.
ತರುಣ್ ಸುಧೀರ್ ಹಾಗೂ ಸೋನಲ್ ಅವರ ಮೊದಲ ಭೇಟಿ ರಾಬರ್ಟ್ ಸಿನಿಮಾದಲ್ಲಿಯೇ ಆಗಿತ್ತು. ಒಬ್ಬರಿಗೊಬ್ಬು ಪರಿಚಯ ಇದ್ದರೂ ಫೋನ್ ಕಾಲ್ ಮಾಡೊವಷ್ಟು ಕ್ಲೋಸ್ ಇರಲಿಲ್ಲ. ಆದರೆ, ಕ್ಯಾಮರಾಮನ್ ಸುಧಾಕರ್, ಯೋಗರಾಜ್ ಭಟ್, ದರ್ಶನ್, ಚಿಕ್ಕಣ್ಣ ಹೀಗೆ ಎಲ್ಲವೂ ಸೇರಿಯೇ ಈ ಒಂದು ಜೋಡಿಯನ್ನ ಒಂದು ಮಾಡಿದೆ. ಈ ಒಂದು ವಿಚಾರವನ್ನ ಸೋನಲ್ ಮತ್ತು ತರುಣ್ ಒಟ್ಟಿಗೆ ಅನುಶ್ರೀ ಆ್ಯಂಕರ್ ಯುಟ್ಯೂಬ್ ಚಾನೆಲ್ನಲ್ಲಿಯೇ ಹೇಳಿಕೊಂಡಿದ್ದಾರೆ.
ತರುಣ್ ಸುಧೀರ್ ಮತ್ತು ಸೋನಲ್ ಮತ್ತೊಮ್ಮೆ ರಿಸೆಪ್ಷನ್ ಮಾಡಿಕೊಳ್ಳುತ್ತಿದ್ದಾರೆ. ಇದೇ ಸೆಪ್ಟೆಂಬರ್-1 ರಂದು ಮಂಗಳೂರಿನಲ್ಲಿ ರಿಸೆಪ್ಷನ್ ನಡೆಯಲಿದೆ. ಈ ರಿಸೆಪ್ಷನ್ ಗೆ ತುಂಬಾ ಆತ್ಮೀಯರಿಗೆ ಮಾತ್ರ ಆಹ್ವಾನ ನೀಡಲಾಗಿದೆ.
ತರುಣ್ ಸುಧೀರ್ ಹಾಗೂ ಸೋನಲ್ ಹನಿಮೂನ್ಗೆ ಹೋಗೋ ಪ್ಲಾನ್ ನಲ್ಲಿದ್ದಾರೆ. ಜೋಡಿಗಳ ಹಾಟ್ ಫೇವರೆಟ್ ಮಾಲ್ಡೀವ್ಸ್ ಗೆ ಹನಿಮೂನ್ಗೆ ಹೋಗುವ ಪ್ಲಾನ್ ಮಾಡುತ್ತಿದ್ದಾರೆ.