ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದ ಎಂಬ ಕಾರಣಕ್ಕೆ ದರ್ಶನ್ ಎಂಡ್ ಗ್ಯಾಂಗ್ ಸದಸ್ಯರು ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಭೀಕರವಾಗಿ ಹತ್ಯೆ ಮಾಡಿಲಾಗಿದೆ. ಪ್ರಕರಣದ ಸಂಬಂಧ ನಟ ದರ್ಶನ್ ರನ್ನು ಬಂಧಿಸಿ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿರಿಸಲಾಗಿದೆ. 60ಕ್ಕು ಹೆಚ್ಚು ಸಿನಿಮಾಗಳಲ್ಲಿ ನಟಿಸಿರೋ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ದರ್ಶನ್ ಕೊಲೆ ಕೇಸ್ ನಲ್ಲಿ ಜೈಲು ಸೇರಿದ್ದು ಅವರ ಸಿನಿ ಭವಿಷ್ಯವೇ ಮುಗಿಯಲಿ ಎಂದು ಭವಿಷ್ಯ ನುಡಿಯಲಾಗಿದೆ.
ಲೈಟ್ ಬಾಯ್ ಆಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ದರ್ಶನ್ ಇಂದು ಸ್ಟಾರ್ ನಟನಾಗಿ ಮಿಂಚಿದ್ದಾರೆ. ತಮ್ಮದೇ ಅಭಿಮಾನಿ ಬಳಗ ಹೊಂದಿರುವ ದರ್ಶನ್ ಕೊಲೆ ಕೇಸ್ ನಲ್ಲಿ ಜೈಲು ಸೇರಿರುವುದು ಅಭಿಮಾನಿಗಳಿಗೆ ನುಂಗಲಾರದ ತುತ್ತಾಗಿದೆ. ಇನ್ನೇನು ಚಾರ್ಜ್ ಶೀಟ್ ಸಲ್ಲಿಕೆ ಆಗುತ್ತೆ. ದಾಸ ಆಚೆ ಬರ್ತಾನೆ. ಮತ್ತೆ ಆನೆ ನೆಡೆದಿದ್ದೇ ದಾರಿ, ಬಾಸ್ ಸಿನಿಮಾ ಮಾಡ್ತಾರೆ ಅಂತ ಕಾದು ಕೂತಿದ್ದ ಅಭಿಮಾನಿಗಳಿಗೆ ಬಿರುಗಾಳಿಯಂತಾ ಸುದ್ದಿಯೊಂದು ಕೇಳಿ ಬಂದಿದೆ.
ನಟ ದರ್ಶನ್ ಗೆ ಕೆಟ್ಟ ಸಮಯ. ಕೊಲೆ ಆರೋಪದ ಸುಳಿಗೆ ಸಿಕ್ಕಿ ಒದ್ದಾಡುತ್ತಿರುವ ದರ್ಶನ್ ಗೆ ಹೇಗಾದ್ರು ಮಾಡಿ ಹೊರ ಬರಬೇಕು ಅನ್ನೋ ಹಂಬಲ, ಆದ್ರೆ ಅದಕ್ಕೆ ಸದ್ಯಕ್ಕೆ ಸರಿಯಾದ ಸಮಯ ಇಲ್ವಂತೆ. ದರ್ಶನ್ ಜೀವನದ ಸರಿಯಾದ ಟೈಂ ಶುರುವಾಗೋದು 2027ಕ್ಕೆ ಅಂತೆ. ಅಲ್ಲಿವರೆಗೂ ದರ್ಶನ್ ಜೈಲಿನಿಂದ ಹೊರಬರಲ್ವಾ ಅಂತ ಚಿಂತೆ ಬೇಡ, ಜೈಲಿನಿಂದ ಹೊರ ಬಂದ್ರೂ ಈ ಕೊಲೆ ಕೇಸ್ ಸಿಕ್ಕಾಪಟ್ಟೆ ಸ್ಟ್ರಾಂಗ್ ಆಗಿ ಟಾರ್ಚರ್ ಮಾಡುತ್ತೆ ಅಂತ ಕಾನೂನು ತಜ್ಞರು ಹೇಳುತ್ತಿದ್ದಾರೆ. ಇದಕ್ಕೆ ಸರಿಯಾಗಿ ಜೋತಿಷ್ಯಿ ಒಬ್ಬರು, ದರ್ಶನ್ಗೆ ಸರಿಯಾದ ಸಮಯ 2027ಕ್ಕೆ ಎಂದಿದ್ದಾರೆ. ಅದು ಕೂಡ ದರ್ಶನ್ ಚಿತ್ರರಂಗವನ್ನ ತೊರೆದು ಫುಲ್ ಟೈಮ್ ರಾಜಕೀಯಕ್ಕೆ ಬರುತ್ತಾರೆ ಅಂತ ಪ್ರಶಾಂತ್ ಕಿಣಿ ಹೆಸರಿನ ಜೋತಿಷಿ ಭವಿಷ್ಯ ನುಡಿದಿದ್ದಾರೆ.
2027ರಿಂದ ದರ್ಶನ್ ರಾಜಕೀಯ ಜೀವನ ಶುರುವಾಗುತ್ತಂತೆ. ಮುಂಬರುವ ಲೋಕಸಭೆ ಎಲೆಕ್ಷನ್ನಲ್ಲಿ ದರ್ಶನ್ ರಾಜಕಾರಣಿ ಆಗುತ್ತಾರೆ ಅಂತ ಜೋತಿಷಿ ಪ್ರಶಾಂತ್ ಕಿಣಿ ಟ್ವಿಟ್ ಮಾಡಿ ಭವಿಷ್ಯ ಹೇಳಿದ್ದಾರೆ. ಇದೇ ಟೈಂನಲ್ಲಿ ದರ್ಶನ್ ಸಿನಿ ಖರಿಯರ್ ಬಗ್ಗೆಯೂ ಹೇಳಿರೋ ಜೋತಿಷಿ, 2024ರ ಆಗಸ್ಟ್ನಿಂದ 2027ರ ಅಕ್ಟೋಬರ್ ವರೆಗು ದಚ್ಚು ಸಿನಿ ಜೀವನ ಸೂಪರೋ ಸೂಪರ್. ಆ ನಂತ್ರ ಸಾಧ್ಯವಿಲ್ಲ ಎಂದಿದ್ದಾರೆ.