ಇಸ್ರೇಲ್ ರಕ್ಷಣಾ ಪಡೆಗಳು ಗಾಜಾದಿಂದ ಅಮೆರಿಕದ ಪ್ರಜೆ ಹರ್ಷ್ ಗೋಲ್ಡ್ ಬರ್ಗ್ ಪೋಲಿನ್ ಸೇರಿದಂತೆ ಆರು ಒತ್ತೆಯಾಳುಗಳ ಶವಗಳನ್ನು ವಶಪಡಿಸಿಕೊಂಡಿದ್ದು, ಮೃತ ದೇಹಗಳು ರಾಫಾ ನಗರದ ಸುರಂಗದಲ್ಲಿ ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೋಲಿನ್ ಶವದ ಜೊತೆ ಈಡನ್ ಯೆರುಷಲಿ (24), ಕಾರ್ಮೆಲ್ ಗ್ಯಾಟ್ (39), ಅಲೊಗ್ ಸರುಸಿ (26), ಅಲೆಕ್ಸ್ ಲುಬ್ನೋವ್ (32) ಮತ್ತು ಒರಿ ಡ್ಯಾನಿನೊ (25) ಶವಗಳು ಪತ್ತೆಯಾಗಿವೆ.ಗಾಜಾದ ಸುರಂಗಗಳಲ್ಲಿ ಪತ್ತೆಯಾದವರಲ್ಲಿ ಹರ್ಷ್ ಗೋಲ್ಡ್ ಬರ್ಗ್ ಪೋಲಿನ್ ಅವರ ದೇಹವೂ ಸೇರಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ದೃಢಪಡಿಸಿದ್ದಾರೆ.
ರಫಾ ನಗರದ ಅಡಿಯಲ್ಲಿರುವ ಸುರಂಗದಲ್ಲಿ, ಇಸ್ರೇಲಿ ಪಡೆಗಳು ಹಮಾಸ್ ವಶಪಡಿಸಿಕೊಂಡ ಆರು ಒತ್ತೆಯಾಳುಗಳ ದೇಹಗಳನ್ನು ವಶಪಡಿಸಿಕೊಂಡವು ಎಂದು ಬಿಡೆನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪೋಲಿನ್ ಅಕ್ಟೋಬರ್ 7 ರಂದು ದಕ್ಷಿಣ ಇಸ್ರೇಲ್ ಮೇಲೆ ಹಮಾಸ್ ಭಯೋತ್ಪಾದಕರು ನಡೆಸಿದ ದಾಳಿಯ ಸಂದರ್ಭದಲ್ಲಿ ಸಿಕ್ಕಿಬಿದ್ದ 251 ಒತ್ತೆಯಾಳುಗಳಲ್ಲಿ ಒಬ್ಬನಾಗಿದ್ದಾರೆ. ಅಕ್ಟೋಬರ್ 7 ರಂದು ಹಮಾಸ್ ಇಸ್ರೇಲ್ಗೆ ನುಗ್ಗಿ 1,200 ಜನರನ್ನು ಕೊಂದಾಗ ಸುಮಾರು 250 ಜನರನ್ನು ಅಪಹರಿಸಲಾಯಿತು. ಕಳೆದ ವರ್ಷದ ಕೊನೆಯಲ್ಲಿ ಕದನ ವಿರಾಮದ ಸಮಯದಲ್ಲಿ 100 ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಯಿಗಿದೆ.