ಬೆಂಗಳೂರು:- ಮುಡಾ,ವಾಲ್ಮೀಕಿ ಹಗರಣಗಳ ಸುಳಿಗೆ ಸಿಕ್ಕ ಕಾಂಗ್ರೆಸ್ ಸರ್ಕಾರಕ್ಕೆ ಇದೀಗ KIDB ಯ CA ಸೈಟ್ ಗಳ ಅಕ್ರಮದ ತಲೆನೋವು ಶುರುವಾಗಿದೆ. ಸಚಿವರಾದ ಪ್ರಿಯಾಂಕ ಖರ್ಗೆ, MB ಪಾಟೀಲ್ ಗೆ ವಿವರಣೆ ಕೇಳಿ ರಾಜ್ಯಪಾಲರು ಪತ್ರ ಬರೆದಿದ್ದಾರೆ. ಈ ಮಧ್ಯೆ ವಿಪಕ್ಷಗಳ ವಿರುದ್ಧ ತೊಡೆ ತಟ್ಟಲು ಕಾಂಗ್ರೆಸ್ ಮುಂದಾಗಿದ್ದು ಬಿಜೆಪಿ- ಜೆಡಿಎಸ್ ಅವಧಿಯಲ್ಲಾದ ಹಗರಣಗಳ ತನಿಖಾ ವರದಿಯ ಅಸ್ತ್ರ ಪ್ರಯೋಗಿಸ್ತಿದೆ ಕೈಪಡೆ….
ಕಾಂಗ್ರೆಸ್ ಸರ್ಕಾರಕ್ಕೆ ಕಳೆದ 6-7 ತಿಂಗಳಿನಿಂದ ಹಗರಣಗಳ ಕಂಟಕ ಎದುರಾಗಿದೆ ಮೂಡಾ, ವಾಲ್ಮೀಕಿ ಹಗರಣಗಳ ನಂತರ KIDBಯ CA ಸೈಟ್ ಗಳ ಅಕ್ರಮದ ಘಾಟು ಜೋರಾಗ್ತಿದೆ. ಮಲ್ಲಿಕಾರ್ಜುನ ಖರ್ಗೆ ಪುತ್ರ ರಾಹುಲ್ ಖರ್ಗೆಗೆ ಕೊಟ್ಟ 5 ಎಕರೆ ಜಾಗ ವಿವಾದದ ಕೇಂದ್ರ ಬಿಂದುವಾಗಿದೆ, ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು ಕೊಟ್ಟ ಹಿನ್ನೆಲೆ ಸರ್ಕಾರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ರಾಜ್ಯಪಾಲರು ವಿವರಣೆ ಕೇಳಿದ್ದಾರೆ…..
ರಾಜ್ಯಪಾಲರ ವಿರುದ್ಧ ಸಚಿವ ಪ್ರಿಯಾಂಕ ಖರ್ಗೆ ಕೆರಳಿ ಕೆಂಡವಾಗಿದ್ದಾರೆ ರಾಜ್ಯಪಾಲರಿಗೆ ಎರಡು ಸಂವಿಧಾನ ಇದೆ. ಬಿಜೆಪಿ ಜೆಡಿಎಸ್ ಗೆ ಒಂದು ಸಂವಿಧಾನ, ಕಾಂಗ್ರೆಸ್ ಗೆ ಮತ್ತೊಂದು ಸಂವಿಧಾನ, ನಮ್ಮ ವಿರುದ್ಧ ಮಾತನಾಡಲು ಛಲವಾದಿ ನಾರಾಯಣಸ್ವಾಮಿ ಅವರನ್ನ ಬಿಟ್ಟಿದ್ದಾರೆ. ದಲಿತರಿಗೆ ದಲಿತರ ಜೊತೆ ಬಡಿದಾಡಿಸುವುದು ಕೋಮುವಾದ ಸೃಷ್ಟಿಸುವುದು
ಇದೆಲ್ಲ RSS, ಬಿಜೆಪಿ ಸಂಚು. ಕಾನೂನಿನಲ್ಲಿ ಎಲ್ಲವೂ ಸರಿ ಇದೆ ಅಂತ ಗೊತ್ತಾದ್ಮೇಲೆ ಆರೋಪ ಮಾಡ್ತಿದ್ದಾರೆ ಅಂತ ಕಿಡಿಕಾರಿದ್ದಾರೆ ಪ್ರಿಯಾಂಕ….
ರಾಜ್ಯಪಾಲರು ವರದಿ ಕೇಳಿರೋದಕ್ಕೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ. ರಾಜ್ಯಪಾಲರು ವರದಿ ಕೇಳಿರೋದು ಬಹಳ ಸಂತೋಷ, ಬೆಂಗಳೂರಿನ ಕೆಂಪೇಗೌಡ ಏರ್ಪೋರ್ಟ್ ಬಳಿ ಒಂದೇ ಹೆಸರಲ್ಲಿ ಎರಡು ಸೈಟ್ ಕೊಟ್ಟಿದ್ದಾರೆ. ಎಂ.ಬಿ ಪಾಟೀಲ್ ಅವರ ಪುತ್ರ ಅಂತ ಅನುಮಾನ ಇದೆ ಸಿಎ ಸೈಟ್ ಇಲ್ಲಿ ಹೇಗೆ ಕೊಡ್ತಾರೆ.
ರಾಹುಲ್ ಖರ್ಗೆ ಅವರು ಎಷ್ಟು ಸೈಟ್ ಬೇಕಾದ್ರೂ ಪಡೆಯಲಿ ನಮ್ಮ ವಿರೋಧ ಇಲ್ಲ ಆದ್ರೆ ಕಾನೂನಾತ್ಮಕವಾಗಿ ಪಡೆಯಲಿ. ಬೇರೆಯವರಿಗೆ ಇಷ್ಟು ವರ್ಷಗಳಾದ್ರೂ ಜಾಗ ಸಿಗಲಿಲ್ಲ ಇವರಿಗೆ ತರಾತುರಿಯಲ್ಲಿ ಹೇಗೆ ಸಿಗ್ತು ಎಲ್ಲವೂ ಬಯಲಾಗಬೇಕು ಅಂತ ಆಗ್ರಹಿಸಿದ್ದಾರೆ ಛಲವಾದಿ…
ಮುಡಾ,ವಾಲ್ಮೀಕಿ ಹಗರಣಗಳಲ್ಲಿ ಸಿಕ್ಕು ನಲುಗುತ್ತಿರುವ ಕೈ ಸರ್ಕಾರವಿಪಕ್ಷಗಳ ಆರೋಪಗಳಿಗೆ ಹಗರಣಗಳ ಅಸ್ತ್ರಗಳನ್ನೇ ಹಿಡಿದು ಠಕ್ಕರ್ ಕೊಡಲು ಮುಂದಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿನ ಹಗರಣಗಳನ್ನು ಬಯಲಿಗೆಳೆದು ತಿರಗೇಟು ಕೊಡಲು ಪ್ಲಾನ್ ರೂಪಿಸಿದೆ. ಕೋವಿಡ್ ಹಗರಣದ ಮಧ್ಯಂತರ ವರದಿಯನ್ನ ಸರ್ಕಾರಕ್ಕೆ ಜಸ್ಟೀಸ್ ಜಾನ್ ಮೈಕೆಲ್ ಡಿ.ಕುನ್ಹಾ ಅವರ ಆಯೋಗ ಸಲ್ಲಿಸಿದೆ. 40% ಹಗರಣ, ಪೇ ಕಮಿಷನ್ ಸೇರಿ ಹಲವು ಹಗರಣಗಳ ಶೀಘ್ರ ತನಿಖೆಗೆ ಸರ್ಕಾರ ಮುಂದಾಗಿದೆ. ಈ ಬಗ್ಗೆ ಮಾತನಾಡಿದ ಸಚಿವ ಎಂಬಿ ಪಾಟೀಲ್ ಬೋವಿ ನಿಗಮ, ಅಂಬೇಡ್ಕರ್ ನಿಗಮ, ಟ್ರಕ್ ಟರ್ಮಿನಲ್ ಬಹಳಷ್ಟು ಹಗರಣಗಳಿವೆ. ಎಲ್ಲಾ ಹಗರಣಗಳನ್ನ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೀವಿ
ಬಿಟ್ ಕಾಯಿನ್ ಮಾತ್ರವಲ್ಲ ಎಲ್ಲಾ ಹಗರಣ ತನಿಖೆ ಆಗಿದೆ
ಪಿಎಸ್ ಐ ನೇಮಕಾತಿ ಸ್ಕ್ಯಾಮ್ ಎಲ್ಲವನ್ನ ತರಿಸಿಕೊಳ್ತೀವಿ
ಕ್ಯಾಬಿನೆಟ್ ಅಪ್ರೂವಲ್ ಇಲ್ಲದೇ ಬಹಳ ಭ್ರಷ್ಟಾಚಾರ ಮಾಡಿದ್ದಾರೆ ಎಲ್ಲವನ್ನು ಬಯಲಿಗೆಳೆಯುತ್ತೇವೆ ಎಂದಿದ್ದಾರೆ ಪಾಟೀಲ್……
ಇದೇ ವಿಚಾರವಾಗಿ ಮಾತಾನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಸಿಎಂ ಸದನದಲ್ಲಿ ಹೇಳಿದ 21 ಹಗರಣಗಳದ್ದು ಕೇವಲ ಟ್ರೈಲರ್ ಅಷ್ಟೇ. ಎಲ್ಲವನ್ನು ಕೂಡ ನಾವು ಲಾಜಿಕಲ್ ಎಂಡ್ ಗೆ ಕೊಂಡು ಹೋಗುತ್ತೇವೆ, ಕೆಲವು ಪ್ರಕರಣಗಳಲ್ಲಿ ಕೇಂದ್ರ ಸರ್ಕಾರದ ಏಜೆನ್ಸಿಗಳು ಬಂದು ಕೈ ಆಡಿಸುತ್ತಿವೆ. ಕಾನೂನಾತ್ಮಕವಾಗಿ ಎಲ್ಲವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ. ಬಿಜೆಪಿಯವರಿಗೂ ಕೂಡ ಇದರಲ್ಲಿ ಅನುಮಾನ ಬೇಡ ಎಂದು ವಿಪಕ್ಷಗಳಿಗೆ ಟಾಂಗ್ ಕೊಟ್ಟಿದ್ದಾರೆ.
ಒಟ್ನಲ್ಲಿ ಸರ್ಕಾರ ಹಾಗೂ ವಿಪಕ್ಷಗಳ ನಡುವೆ ಹಗರಣಗಳ ಫೈಟ್ ನಡಿತಿದೆ. ವಾಲ್ಮೀಕಿ, ಮೂಡಾ ಜೊತೆ CA ಸೈಟ್ ಹಗರಣಗಳನ್ನು ಹಿಡಿದು ಹೋರಾಟ ಮಾಡ್ತಿರೋ ಬಿಜೆಪಿಗೆ, ಕೋವಿಡ್, 40%, ಪೇ ಕಮಿಷನ್, ಟ್ರಕ್ ಟರ್ಮಿನಲ್ ಸೇರಿ ಹಲವು ಹಗರಣಗಳನ್ನು ಹೊರತಂದು ಠಕ್ಕರ್ ಕೊಡಲು ಕಾಂಗ್ರೆಸ್ ಸರ್ಕಾರ ಪ್ಲಾನ್ ರೂಪಿಸಿದೆ. ಈ ಹಗರಣಗಳ ವಾರ್ ಸದ್ಯ ರಣ ರೋಚಕವಾಗ್ತಿದ್ದು ಯಾರ್ಯಾರ ಬಣ್ಣ ಬಟಾಬಯಲಾಗಲಿದೆ ಎಂಬುದನ್ನು ಕಾದುನೋಡಬೇಕಾಗಿದೆ