ಬೆಂಗಳೂರು: ಬೈಯಪ್ಪನಹಳ್ಳಿ-ಕೆ.ಆರ್. ಪುರ ಕಾಮಗಾರಿ ಮುಗಿಯದೇ ಮಾರ್ಚ್ 25 ರಂದು ಉದ್ಘಾಟನೆಗೆ ಬಿಜೆಪಿ ಸಿದ್ಧತೆ ನಡೆಸಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ (Randeep singh surjewala) ಆರೋಪಿಸಿದ್ದಾರೆ. ಈ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, (namma metro)ನಮ್ಮ ಮೆಟ್ರೋದಲ್ಲಿ ಸೇಫ್ಟೀ ಇಲ್ಲ. ಪ್ರತಿಬಾರಿ ಮಿಸ್ಟೇಕ್ ಆಗ್ತಾನೇ ಇವೆ. ಹಲವು ಕಾಮಗಾರಿಗಳನ್ನ ಉದ್ಘಾಟಿಸ್ತಿದ್ದಾರೆ, ಅರ್ಧಂಬರ್ಧ ಕಾಮಗಾರಿ ಉದ್ಘಾಟಿಸುತ್ತಿದ್ದಾರೆ.
ನವೆಂಬರ್ 22ರಂದು ಬೆಂಗಳೂರು ವಿಮಾನ ನಿಲ್ದಾಣ ಎರಡನೇ ರನ್ವೇ ಉದ್ಘಾಟನೆ ಮಾಡಿದರು. ಫೆಬ್ರವರಿಯಲ್ಲಿ ಶಿವಮೊಗ್ಗ ಏರ್ಪೋರ್ಟ್ ಉದ್ಘಾಟನೆ ಮಾಡಿದರು, ಇಲ್ಲಿಯವರೆಗೆ ವಿಮಾನ ಹಾರಾಟವಿಲ್ಲ. ಮಾರ್ಚ್ 12ರಂದು ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇ ಉದ್ಘಾಟನೆ ಮಾಡಿದರು, ಆದರೆ ಸರ್ವಿಸ್ ರಸ್ತೆಗಳನ್ನು ನಿರ್ಮಾಣ ಮಾಡಿಲ್ಲ. ಅಂಡರ್ ಪಾಸ್ ಸರಿಯಾಗಿ ನಿರ್ಮಿಸಿಲ್ಲ. ಅರ್ಧಂಬರ್ಧ ಕಾಮಗಾರಿಗಳನ್ನ ಉದ್ಘಾಟಿಸ್ತಿದ್ದಾರೆ. ಚುನಾವಣೆಗಾಗಿ ತರಾತುರಿಯಲ್ಲಿ ಮಾಡ್ತಿದ್ದಾರೆ. ಈಗ ಮೆಟ್ರೋ ಲೈನ್ ಉದ್ಘಾಟನೆಗೆ ಬರ್ತಿದ್ದಾರೆ. ಬೈಯಪ್ಪನಹಳ್ಳಿಯಿಂದ ಕೆ.ಆರ್.ಪುರಂ (KRpuram)ಲೈನ್ ಕೆಲಸ ಇನ್ನೂ ನಡೆದಿದೆ,
ಸಂಪೂರ್ಣ ಆಗಿಲ್ಲ. ಸಂಪೂರ್ಣಗೊಳ್ಳಲು ಇನ್ನೂ 6 ತಿಂಗಳ ಸಮಯಾವಕಾಶ ಬೇಕಿದೆ. ಆದರೆ ಕೆ.ಆರ್. ಪುರದಿಂದ ವೈಟ್ ಫೀಲ್ಡ್ ಮೆಟ್ರೋಗೆ ಉದ್ಘಾಟನೆಗೆ ಮುಂದಾಗಿದ್ದಾರೆ. ಸಾರ್ವಜನಿಕ ರಕ್ಷಣೆ ಮುಖ್ಯ ಅಲ್ಲವೇ? ಒಂದು ಟ್ರೈನ್ ಹೋದ ಮೇಲೆ ಇನ್ನೊಂದು ಟ್ರೈನ್ ಹೋಗಬೇಕು ಈಗಿನ ಸ್ಥಿತಿಯಲ್ಲಿ. ಯಾಕೆ ನೀವು ಕಾಮಗಾರಿ ಮುಗಿಯದ ಯೋಜನೆ ಉದ್ಘಾಟನೆ ಮಾಡ್ತಾ ಇದ್ದೀರಾ? ಟಾರ್ಗೆಟ್ ರೀಚ್ ಪರ್ಮಿಷನ್ ಸ್ವೀಡ್ ಗೆ ಹೊಂದಾಣಿಕೆ ಆಗಿಲ್ಲ. ನೀವು ಯಾಕೆ ಉದ್ಘಾಟನೆ ಮಾಡ್ತಾ ಇದ್ದೀರಾ (pm modi)ಪ್ರಧಾನಿ ಮೋದಿ? ಎಂದು ಪ್ರಶ್ನಿಸಿದರು.