ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಗ್ಯಾಂಗ್ ನ ಮೂವರು ಆರೋಪಿಗಳು ಭಾಗಿಯಾಗಿಲ್ಲ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ನಿಖಿಲ್ ನಾಯ್ಕ್, ಕೇಶವಮೂರ್ತಿ ಹಾಗೂ ಕಾರ್ತಿಕ್ ಕೊಲೆಯಲ್ಲಿ ಭಾಗಿಯಾಗಿಲ್ಲ ಅನ್ನೋದನ್ನು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ. ಈ ಮೂವರು ರೇಣುಕಾಸ್ವಾಮಿಯನ್ನು ತಾವೇ ಕೊಲೆ ಮಾಡಿದ್ದಾಗಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದರು. ಮೃತದೇಹ ಸಾಗಾಟ ಹಾಗೂ ಶರಣಾಗತಿ ಆಗಲು ಮೂವರು ಒಟ್ಟಿಗೆ ಇದ್ದರು. ಆದರೆ ಕೊಲೆಯಲ್ಲಿ ಮೂವರ ಪಾತ್ರ ಏನೂ ಇಲ್ಲ ಎಂಬುವುದು ತನಿಖೆ ವೇಳೆ ತಿಳಿದುಬಂದಿದೆ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ಈ ಮೂವರ ವಿರುದ್ಧ ಚಾರ್ಜ್ ಶೀಟ್ನಲ್ಲಿ 201 ಅಡಿ ಸಾಕ್ಷಿ ನಾಶ ಆರೋಪವಿದೆ. ಮೂವರ ವಿರುದ್ಧ ಸಾಕ್ಷ್ಯ ನಾಶ ಮಾಡಿದ ಆರೋಪ ಪ್ರಸ್ತಾಪ ಮಾಡಲಾಗಿದೆ ಸಾಕ್ಷಿ ನಾಶ ಹಾಗೂ ಪೊಲೀಸರಿಗೆ ಸುಳ್ಳು ಮಾಹಿತಿ ಆರೋಪ ಇರುವುದರಿಂದ ಇವರಿಗೆ ಬೇಗ ಜಾಮೀನು ಸಿಗಬಹುದು ಎನ್ನಲಾಗುತ್ತಿದೆ.