ಬೆಂಗಳೂರು:– ಸಿಎಂ ಸಿದ್ದರಾಮಯ್ಯ ಅವರು ಕಳ್ಳಾಟವಾಡ್ತಿದ್ದ ಬ್ಯಾಂಕ್ಗಳಿಗೆ ಬಿಸಿ ಮುಟ್ಟಿಸಿದ್ದು, ಸರ್ಕಾರದ ಖಜಾನೆಗೆ 22 ಕೋಟಿ ರೂ ಹರಿದು ಬಂದಿದೆ.
ಈ ಹಿಂದೆ ಮಾಡಿದ್ದ ಎರಡು ಪ್ರತ್ಯೇಕ ನಿಶ್ಚಿತ ಠೇವಣಿಗಳನ್ನು ಹಿಂದಿರುಗಿಸಲು ಎಸ್ ಬಿಐ ಹಾಗೂ ಪಿಎನ್ ಬಿ ನಿರಾಕರಿಸಿದ್ದವು.
ಇದರ ಬೆನ್ನಲ್ಲೇ ಈ ಎರಡೂ ಬ್ಯಾಂಕಿನಲ್ಲಿ ಇರಿಸಿರುವ ಸರ್ಕಾರದ ಎಲ್ಲ ಠೇವಣಿಗಳನ್ನು ಹಿಂಪಡೆಯುವಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಇದರ ಬೆನ್ನಲ್ಲೇ ಬ್ಯಾಂಕ್ಗಳು ಸರ್ಕಾರಕ್ಕೆ ನಿಶ್ಚಿತ ಠೇವಣಿಯನ್ನು ಮರುಪಾವತಿಸಿವೆ. ಈ ಮೂಲಕ ಸರ್ಕಾರಕ್ಕೆ 22 ಕೋಟಿ ರೂಪಾಯಿ ಬಂದಿದೆ.
ರಾಜ್ಯ ಸರ್ಕಾರದ ಒಂದೇ ಒಂದು ಆದೇಶಕ್ಕೆ ಬೆದರಿದ ಬ್ಯಾಂಕ್ಗಳು ವರ್ಷಗಟ್ಟಲೇ ಬಾಕಿಯಿದ್ದ 22 ಕೋಟಿ ರೂ. ಹಣ ಸರ್ಕಾರದ ಖಜಾನೆಗೆ ಜಮೆ ಮಾಡಿವೆ. ಎಸ್ಬಿಐನಿಂದ 9.67 ಕೋಟಿ ರೂಪಾಯಿ ಸರ್ಕಾರದ ಖಜಾನೆಗೆ ಜಮೆಯಾಗಿದೆ. ಇನ್ನು ಪಿಎನ್ಬಿನಿಂದ ಒಂದು ವರ್ಷದ ಬಡ್ಡಿ ಸಹಿತ 13.9 ಕೋಟಿ ರೂ. ಜಮೆಯಾಗಿದೆ.
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸರ್ಕಾರಕ್ಕೆ ಬರಬೇಕಿದ್ದ 22 ಕೋಟಿ ರೂ. ಹಣವನ್ನು ನೀಡಿದೆ ವರ್ಷಗಟ್ಟಲೇ ಬಾಕಿ ಉಳಿಸಿಕೊಂಡಿದ್ದವು. ಈ ಬಗ್ಗೆ ಸರ್ಕಾರ ಎಷ್ಟೇ ಪತ್ರ ಬರೆದರೂ ಸಹ ನಿಶ್ಚಿತ ಠೇವಣಿಗಳನ್ನು ಹಿಂದಿರುಗಿಸಲು ಬ್ಯಾಂಕ್ಗಳು ನಿರಾಕರಿಸಿದ್ದವು. ಇದರಿಂದ ಸಿಡಿಮಿಡಿಗೊಂಡಿದ್ದ ಸಿದ್ದರಾಮಯ್ಯ, ಈ 2 ಬ್ಯಾಂಕ್ಗಳಲ್ಲಿದ್ದ ಸರ್ಕಾರದ ಎಲ್ಲಾ ಖಾತೆ ಕ್ಲೋಸ್ ಮಾಡುವಂತೆ ಸುತ್ತೋಲೆ ಹೊರಡಿಸಿದ್ದರು. ಸರ್ಕಾರದ ಈ ನಿರ್ಧಾರಕ್ಕೆ ಕಂಗೆಟ್ಟು ಎರಡೂ ಬ್ಯಾಂಕಿನ ಅಧಿಕಾರಿಗಳು, ಸಿದ್ದರಾಮಯ್ಯನವರ ಬಳಿ ಓಡೋಡಿ ಬಂದು ಶೀಘ್ರದಲ್ಲೇ ಶ್ಚಿತ ಠೇವಣಿ ಮರುಪಾವತಿಸುವುದಾಗಿ ಹೇಳಿದ್ದರು. ಅದರಂತೆ ಇದೀಗ ಎರಡು ಬ್ಯಾಂಕ್ಗಳಿಂದ ಸರ್ಕಾರದ ಖಜಾನೆಗೆ ಬರೋಬ್ಬರಿ 22 ಕೋಟಿ ರೂಪಾಯಿ ವಾಪಸ್ ಬಂದಿದೆ.