ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಹೆಸರು ಕೇಳಿ ಬಂದಿದ್ದರಿಂದ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸಿದ್ದಾರೆ. ಸುಮಾರು ಮೂರು ತಿಂಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್ ರನ್ನು ಇದೀಗ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದಾರೆ. ಸದ್ಯ ಈ ಪ್ರಕರಣದ ತನಿಖೆ ಅಂತಿಮ ಹಂತದಲ್ಲಿದ್ದು, ಇಂದು ಚಾರ್ಜ್ಶೀಟ್ ಸಲ್ಲಿಸಲು ಪೊಲೀಸರು ಸಜ್ಜಾಗಿದ್ದಾರೆ. ಅಂದ ಹಾಗೆ ಪೊಲೀಸ್ ಇಲಾಖೆ ಚಾರ್ಜ್ಶೀಟ್ಗಾಗಿ ಸಾಕಷ್ಟು ಹಣ ಖರ್ಚು ಮಾಡಿದೆ ಎನ್ನಲಾಗುತ್ತಿದೆ.
ಪೊಲೀಸ್ ಇಲಾಖೆಯು ಪ್ರಕರಣದ ತನಿಖೆಗೆ ₹5 ಲಕ್ಷ ಹಣ ಖರ್ಚು ಮಾಡಿದೆ ಎಂದು ತಿಳಿದುಬಂದಿದೆ. ಕೊಲೆ ಪ್ರಕರಣದ ಸಂಬಂಧ 22 ಬಂಡಲ್ ಚಾರ್ಚ್ ಶೀಟ್ ಸಲ್ಲಿಕೆಗೆ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದು, ಒಟ್ಟಾರೆ 90 ಸಾವಿರ ಪುಟಗಳಿಗೆ 90 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ. ಉಳಿದ ಹತ್ತು ಸಾವಿರ ರೂಪಾಯಿ ಕವರ್ ಬೈಂಡಿಂಗ್ಗೆ ಎಂದು ಖರ್ಚು ಮಾಡಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ.
17 ಆರೋಪಿಗಳಿಗೂ ಒಂದೊಂದು ಕಾಪಿ ಚಾರ್ಜ್ಶೀಟ್ ಸಲ್ಲಿಸಬೇಕು. ನ್ಯಾಯಾಲಯಕ್ಕೆ ಮತ್ತು ವಕೀಲರಿಗೆ ಸೇರಿ ಒಟ್ಟು 22 ಸೆಟ್ ಬೇಕು. 3 ದಿನಗಳಿಂದ ಚಾರ್ಜ್ಶೀಟ್ನಲ್ಲಿ ಯಾವುದೇ ತಪ್ಪಾಗದ ರೀತಿ ಎಚ್ಚರವಹಿಸಲಾಗಿದೆ. ಚಾರ್ಜ್ಶೀಟ್ ಸೇರಿ ತನಿಖೆಯ ಒಟ್ಟು ಖರ್ಚು 6 ಲಕ್ಷ 45 ಸಾವಿರ ರೂಪಾಯಿಯಾಗಿದೆ ಎಂದು ತಿಳಿದುಬಂದಿದೆ.