ರೇಣುಕಾಸ್ವಾಮಿ ಕೊಲೆ ಕೇಸ್ ಗೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ಬಗ್ಗೆ ಕಮಿಷನರ್ ದಯಾನಂದ್ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ.
ಪ್ರಕರಣದ ತನಿಖೆ ಕಂಪ್ಲೀಟ್ ಆಗಿದೆ. 17ಆರೋಪಿಗಳ ವಿರುದ್ಧ ಹಲವು ಸಾಕ್ಷ್ಯಗಳು ಕಲೆ ಹಾಕಿದ್ದು ಅಂತಿಮ ವರದಿ ರೆಡಿಯಾಗಿದೆ. 3991ಪುಟಗಳನ್ನ ಚಾರ್ಜ್ ಶೀಟ್ ನಲ್ಲಿ ಅಳವಡಿಸಲಾಗಿದೆ. ಕೊಲೆ ಕೇಸ್ ಗೆ ಸಂಬಂಧಿಸಿದಂತೆ ಹದಿನೇಳು ಜನರನ್ನ ಬಂಧಿಸಲಾಗಿತ್ತು. ಕೆಲವರನ್ನ ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲಾಗಿದೆ.
ಎಫ್ ಎಸ್ ಎಲ್ ಮತ್ತು ಸಿಎಫ್ ಎಸ್ ಎಲ್ ನಿಂದ ವರದಿ ಬಂದಿದೆ. ಸಿಎಫ್ ಎಸ್ ಎಲ್ ನಿಂದ ಒಂದಷ್ಟು ವರದಿ ಬಾಕಿ ಇದೆ. ಸರ್ಕಾರಿ ಅಧಿಕಾರಿಗಳನ್ನೂ ಈ ಕೇಸ್ ನಲ್ಲಿ ಸಾಕ್ಷಿಗಳನ್ನಾಗಿ ಮಾಡಿಕೊಳ್ಳಲಾಗಿದೆ. 231 ಸಾಕ್ಷಿದಾರರನ್ನ ಉಲ್ಲೇಖ ಮಾಡಲಾಗಿದೆ. ಬೆಂಗಳೂರಿನ ಎಫ್ ಎಸ್ ಎಲ್ ನಿಂದ ಎಲ್ಲಾ ವರದಿ ಬಂದಿವೆ. ಸಿಎಫ್ ಎಸ್ ಎಲ್ ಹೈದ್ರಾಬಾದ್ ನಿಂದ ಎಲೆಕ್ಟ್ರಾನಿಕ್ ಡಿವೈಸ್ ಗಳ ವರದಿ ಬಂದಿದೆ.
ಇನ್ನೂ ಒಂದಷ್ಟು ವರದಿ ಬರಬೇಕಿದೆ. ಸಾಕಷ್ಟು ತಾಂತ್ರಿಕ ಸಾಕ್ಷಿಗಳು ದೊರೆತಿವೆ. ತನಿಖೆಯಲ್ಲಿ ಎಲ್ಲವನ್ನೂ ಅಳವಡಿಸಲಾಗಿದೆ. ಇದು ಉತ್ತಮವಾದ ತನಿಖೆ. ಎಲ್ಲಾ ರೀತಿಯಾದ ತನಿಖೆ ಮಾಡಲಾಗಿದೆ. ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ನಂತರ ಫಾಸ್ಟ್ ರ್ಯಾಕ್ ಬಗ್ಗೆ ಚರ್ಚೆ ಮಾಡಲಾಗುತ್ತೆ ಎಂದರು.