ಇತ್ತೀಚಿಗೆ ಸುರಿದ ಸತತ ಮಳೆಗೆ ಕಲಬುರಗಿ ಜಿಲ್ಲೆ ನಲುಗಿ ಹೋಗಿದ್ದು ಸಾವಿರಾರು ಎಕರೆ ಹೆಸರು ಉದ್ದು ಹಾಳಾಗಿದ್ದು ಅನ್ನದಾತ ಕಂಗಾಲಾಗಿದ್ದಾನೆ. ಕೈಗೆ ಬಂದಿದ್ದ ಹೆಸರು ಉದ್ದು ನೀರುಪಾಲಾಗಿದ್ದು ರೈತರಿಗೆ ಮುಂದೇನು ಅನ್ನೋ ಚಿಂತೆ ಕಾಡುತ್ತಿದೆ..
ಹೀಗೆ ಕಲ್ಯಾಣ ಕರ್ನಾಟಕ ಮುಳುಗಿದ್ರೂ ಸರ್ಕಾರ ಮಾತ್ರ ಮಲಗಿದಂತಿದೆ ಅನ್ನೋ ಆರೋಪ ಕೇಳಿ ಬರ್ತಿದೆ ಸರ್ಕಾರ ಕೂಡಲೇ ಸರ್ವೇ ಮಾಡಿ ಬೆಳೆ ಹಾನಿಗೆ ಪರಿಹಾರ ಕೊಡಬೇಕು ಅಂತ ರೈತರ ಬಳಗ ಆಗ್ರಹಿಸಿದೆ..