ನಮ್ಮ ಮೆಟ್ರೊ ರೈಲು ಕಾಮಗಾರಿಯ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದು, ಸುರಂಗ ಕೊರೆದು ಟಿಬಿಎಂ ತುಂಗಾ ಹೊರ ಬಂದಿದೆ.
ನಾಗವಾರ ನಿಲ್ದಾಣದ ಕಟ್ ಮತ್ತು ಕವರ್ ಶಾಫ್ಟ್ನಲ್ಲಿ ಪೂರ್ಣ ಸುರಂಗ ಕೊರೆದು ತುಂಗಾ-ಟಿಬಿಎಂ ಹೊರಬಂದಿದೆ. 936.6 ಮೀ ಸುರಂಗ ಕೊರೆಯುವ ಕಾಮಗಾರಿಯನ್ನು ಯಂತ್ರ ಪೂರ್ಣಗೊಳಿಸಿದೆ.
ಕಾಡುಗೊಂಡನಹಳ್ಳಿ ನಿಲ್ದಾಣದಲ್ಲಿ ಕಾಮಗಾರಿ ಪ್ರಾರಂಭ ಹಿನ್ನೆಲೆ ನಾಗವಾರ ನಿಲ್ದಾಣದ ಸೌತ್ ಕಟ್ ಮತ್ತು ಕವರ್ ಶಾಫ್ಟ್ ನಲ್ಲಿ ಪೂರ್ಣ ಮಾಡಲಾಗಿದೆ.
ಒಟ್ಟು 20992 ಮೀ ಸುರಂಗ ಮಾರ್ಗದಲ್ಲಿ 20582.7 ಮೀ ಅಂದರೆ ಶೇ 98%. ಪೂರ್ಣ ಆಗಿದ್ದು, ಒಟ್ಟಾರೆ ರೀಚ್-6ರ ಸುರಂಗ ಮಾರ್ಗಕ್ಕಾಗಿ ನಿಯೋಜಿಸಲಾದ 9 ಟಿಬಿಎಂ ಇದಾಗಿದೆ ಎನ್ನಲಾಗಿದೆ.
ಇಲ್ಲಿಯವರೆಗೆ 8 ಟಿಬಿಎಂಗಳು ಸುರಂಗ ಮಾರ್ಗದ ಕಾಮಗಾರಿ ಪೂರ್ಣಗೊಳಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.