ಚಿತ್ರದುರ್ಗದ ಮೂಲಕ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿ ಒಟ್ಟು 17 ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದ ತನಿಖೆ ಮುಕ್ತಾಯದ ಹಂತಕ್ಕೆ ಬಂದಿದ್ದು, ಪೊಲೀಸರು ಇಂದು 3991 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
ಇದರ ಮಧ್ಯೆ ನಟ ದರ್ಶನ್ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ದರ್ಶನ್ ತಪಾಸಣೆಗಾಗಿ ವೈದ್ಯರು ಬಳ್ಳಾರಿ ಜೈಲಿಗೆ ಆಗಮಿಸಿದ್ದಾರೆ. ಸದ್ಯ ಜೈಲಿನಲ್ಲಿ ದರ್ಶನ್ಗೆ ವೈದ್ಯರು ರೂಟಿನ್ ಚೆಕಪ್ ಮಾಡಿದ್ದು, ಬಿಪಿ, ಶುಗರ್ ಸೇರಿದಂತೆ ಬೆನ್ನು ನೋವು ಇರುವ ಹಿನ್ನೆಲೆಯಲ್ಲಿ ತಪಾಸಣೆ ನಡೆಸಿದ್ದಾರೆ. ಚಾರ್ಜ್ಶೀಟ್ ಸಲ್ಲಿಕೆ ದಿನವೇ ದರ್ಶನ್ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದೆ. ಚಾರ್ಜ್ಶೀಟ್ ಸಲ್ಲಿಕೆಯಾಗಿರೋ ಬೆನ್ನಲ್ಲೇ ದರ್ಶನ್ಗೆ ಟೆನ್ಷನ್ ಶುರುವಾದ ಕಾರಣ ಆರೋಗ್ಯದಲ್ಲಿ ಬದಲಾವಣೆಯಾಗಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಏನಾಯಿತು? ಕೊಲೆಗೆ ಯಾರೆಲ್ಲ ಪ್ರಯತ್ನಿಸಿದರು? ತನಿಖೆ ವೇಳೆ ಸಿಕ್ಕ ಸಾಕ್ಷಿಗಳು ಸೇರಿದಂತೆ ಎಲ್ಲವೂ 4,800ಕ್ಕೂ ಪುಟಗಳ ಚಾರ್ಜ್ಶೀಟ್ನಲ್ಲಿ ಇರಲಿದೆ. ಇಂದು ಚಾರ್ಜ್ಶೀಟ್ ಕರೆಕ್ಷನ್ ಕೆಲಸ ನಡೆಯುತ್ತಿದೆ. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್ಪಿಪಿ) ಸೂಚಿಸಿದ ಸಣ್ಣಪುಟ್ಟ ತಪ್ಪುಗಳನ್ನು ಸರಿ ಮಾಡುವ ಕೆಲಸ ಆಗುತ್ತಿದೆ. ನಂತರ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಕೆ ಆಗಲಿದೆ.