ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಸಂಬಂಧ ಒಟ್ಟು 17 ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದ ತನಿಖೆ ಮುಕ್ತಾಯದ ಹಂತಕ್ಕೆ ಬಂದಿದ್ದು, ಇಂದು ಪ್ರೈಮರಿ ಚಾರ್ಜ್ಶೀಟ್ ಸಲ್ಲಿಸಲು ಪೊಲೀಸರು ಮುಂದಾಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಪೊಲೀಸರು ಇಂದು 3991 ಪುಟಗಳ ಚಾರ್ಜ್ಶೀಟ್ ಸಲ್ಲಿಸುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ್, ಪ್ರಕರಣದ ತನಿಖೆ ಕಂಪ್ಲೀಟ್ ಆಗಿದೆ. 17 ಆರೋಪಿಗಳ ವಿರುದ್ಧ ಹಲವು ಸಾಕ್ಷ್ಯಗಳು ಕಲೆ ಹಾಕಿದ್ದು, ಅಂತಿಮ ವರದಿ ರೆಡಿಯಾಗಿದೆ. ಒಟ್ಟು 3991 ಪುಟಗಳನ್ನ ಚಾರ್ಜ್ ಶೀಟ್ನಲ್ಲಿ ಅಳವಡಿಸಲಾಗಿದೆ. ಕೊಲೆ ಕೇಸ್ಗೆ ಸಂಬಂಧಿಸಿದಂತೆ 17 ಜನರನ್ನ ಬಂಧಿಸಲಾಗಿತ್ತು. ಕೆಲವರನ್ನ ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲಾಗಿದೆ. FSL ಮತ್ತು CFSLನಿಂದ ವರದಿ ಬಂದಿದೆ ಎಂದರು.
CFSLನಿಂದ ಒಂದಷ್ಟು ವರದಿ ಬಾಕಿ ಇದೆ. ಸರ್ಕಾರಿ ಅಧಿಕಾರಿಗಳನ್ನೂ ಈ ಕೇಸ್ನಲ್ಲಿ ಸಾಕ್ಷಿಗಳನ್ನಾಗಿ ಮಾಡಿಕೊಳ್ಳಲಾಗಿದೆ. 231ಸಾಕ್ಷಿದಾರರನ್ನ ಉಲ್ಲೇಖ ಮಾಡಲಾಗಿದೆ. ಬೆಂಗಳೂರಿನ ಎಫ್ಎಸ್ಎಲ್ನಿಂದ ಎಲ್ಲಾ ವರದಿ ಬಂದಿವೆ. ಸಿಎಫ್ಎಸ್ಎಲ್ ನಿಂದ ಎಲೆಕ್ಟ್ರಾನಿಕ್ ಡಿವೈಸ್ಗಳ ವರದಿ ಬಂದಿದೆ. ಇನ್ನೂ ಒಂದಷ್ಟು ವರದಿಗಳು ಬರಬೇಕಿದೆ. ಸಾಕಷ್ಟು ತಾಂತ್ರಿಕ ಸಾಕ್ಷಿಗಳು ದೊರೆತಿವೆ. ತನಿಖೆಯಲ್ಲಿ ಎಲ್ಲವನ್ನೂ ಅಳವಡಿಸಲಾಗಿದೆ. ಇದು ಉತ್ತಮವಾದ ತನಿಖೆ. ಎಲ್ಲಾ ರೀತಿಯಾದ ತನಿಖೆ ಮಾಡಲಾಗಿದೆ. ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ನಂತರ ಫಾಸ್ಟ್ ಟ್ರಾಕ್ ಕೋರ್ಟ್ ಬಗ್ಗೆ ಚರ್ಚೆ ಮಾಡಲಾಗುತ್ತೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.