ಬಾಲಿವುಡ್ ಬ್ಯೂಟಿ ನಟಿ ದೀಪಿಕಾ ಪಡುಕೋಣೆ ಸದ್ಯದಲ್ಲೇ ಅಮ್ಮನಾಗುತ್ತಿದ್ದಾರೆ. ಮೊದಲ ಮಗುವಿನ ಸ್ವಾಗತಕ್ಕೆ ರೆಡಿಯಾಗಿರೋದ ದೀಪಿಕಾ ಪಡುಕೋಣೆ ಇದೇ ಖುಷಿಯಲ್ಲಿ ಭರ್ಜರಿಯಾಗಿ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿದ್ದಾರೆ.
ಗರ್ಭಿಣಿಯಾದ ಬಳಿಕ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಮೊದಲ ಮಗುವನ್ನು ಸ್ವಾಗತಿಸಲು ದೀಪಿಕಾ-ರಣವೀರ್ ಕಾಯ್ತಿದ್ದಾರೆ. ಇದೀಗ ದೀಪಿಕಾ ಪಡುಕೋಣೆ ಬೇಬಿ ಬಂಪ್ ಫೋಟೋಶೂಟ್ ಮೂಲಕ ಮಿಂಚುತ್ತಿದ್ದಾರೆ.
ಮದುವೆಯಾದ ಆರು ವರ್ಷಗಳ ಬಳಿಕ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಮೊದಲ ಮಗುವನ್ನು ಬರಮಾಡಿಕೊಳ್ಳುತ್ತಿದ್ದಾರೆ. ಇದೇ ತಿಂಗಳ ಕೊನೆಯಲ್ಲಿ ದೀಪಿಕಾ ಮುದ್ದಾದ ಮಗುವಿಗೆ ಜನ್ಮ ನೀಡಲಿದ್ದಾರೆ.
ದೀಪಿಕಾ ಪಡುಕೋಣೆ ಗರ್ಭಿಣಿಯಾದ ಬಳಿಕ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಈ ಹಿಂದೆ ದೀಪಿಕಾ ಕೆಲವೊಂದು ಬೇಬಿ ಬಂಪ್ ಫೋಟೋ ಗಳನ್ನು ಹಂಚಿಕೊಂಡಿದ್ದರು. ಆದರೆ ಈ ಭಾರಿ ನಟಿ ಶೇರ್ ಮಾಡಿರುವ ಬೇಬಿ ಬಂಪ್ ಫೋಟೋಗಳು ಸಖತ್ ಡಿಫರೆಂಟ್ ಆಗಿದ್ದು ಮತ್ತಷ್ಟು ಸುಂದರವಾಗಿದೆ.
ತುಂಬು ಗರ್ಭಿಣಿಯಾಗಿರುವ ದೀಪಿಕಾ ಪಡುಕೋಣೆ ಬ್ಲ್ಯಾಕ್ ಥೀಮ್ನಲ್ಲಿ ಫೋಟೋಶೂಟ್ ಮಾಡಿದ್ದಾರೆ. ಬ್ಲ್ಯಾಕ್ ಡ್ರೆಸ್ ತೊಟ್ಟ ದೀಪಿಕಾ ಪಡುಕೋಣೆ ಬೇಬಿ ಬಂಪ್ ತೋರಿಸುತ್ತಾ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ರಣವೀರ್ ಸಿಂಗ್ ಜೊತೆ ದೀಪಿಕಾ ಪಡುಕೋಣೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಪ್ರೆಗ್ನೆಸಿಯ ಸ್ಟನ್ನಿಂಗ್ ಫೋಟೋಗಳನ್ನು ದೀಪಿಕಾ ಪಡುಕೋಣೆ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ದೀಪಿಕಾ ಪಡುಕೋಣೆಗೆ ಸೆಪ್ಟೆಂಬರ್ 28ಕ್ಕೆ ಡೆಲಿವರಿ ಡೇಟ್ ನೀಡಲಾಗಿದೆ. ಮೊದಲ ಮಗುವಿನ ಆಗಮನಕ್ಕೆ ರಣವೀರ್ ಹಾಗೂ ದೀಪಿಕಾ ಭರ್ಜರಿ ತಯಾರಿ ಮಾಡಿಕೊಂಡಿದ್ದು ಸೌತ್ ಬಾಂಬೆ ಆಸ್ಪತ್ರೆಯಲ್ಲಿ ಡೆಲಿವರಿ ಆಗಲಿದೆ.
ಪಂಡಿತ್ ಜಗನ್ನಾಥ್ ಗುರೂಜಿ ಅವರು ರಣವೀರ್ ಮತ್ತು ದೀಪಿಕಾ ಜನಿಸುವ ಮಗುವಿನ ಬಗ್ಗೆ ಮಾತನಾಡಿದ್ದಾರೆ. ಪಂಡಿತ್ ಜಗನ್ನಾಥ್ ಗುರೂಜಿ ಪ್ರಸಿದ್ಧ ಜ್ಯೋತಿಷಿ ಈ ಹಿಂದೆ 2024ರಲ್ಲಿ ದೀಪಿಕಾ ಗರ್ಭಿಣಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು.
ಪಂಡಿತ್ ಜಗನ್ನಾಥ ಗುರೂಜಿಯವರ ಭವಿಷ್ಯವಾಣಿಯ ಪ್ರಕಾರ, ಈ ಮಗು ತನ್ನ ಹೆತ್ತವರಿಗೆ ರಾಜಕುಮಾರನಾಗ್ತಾನೆ ಅಂದರೆ ಗಂಡು ಮಗುವಾಗುತ್ತದೆ ಎಂದಿದ್ದಾರೆ. ಆ ಮಗು ತನ್ನ ತಂದೆ ತಾಯಿ ಇಬ್ಬರಿಗೂ ಅದೃಷ್ಟವನ್ನು ತರಲಿದ್ದಾನೆ. ಆ ಮಗು ರಣಬೀರ್-ದೀಪಿಕಾ ಪಾಲಿಗೆ ಅದೃಷ್ಟದ ಮಗುವಾಗಲಿದೆ ಎಂದು ಜ್ಯೋತಿಷಿ ಹೇಳಿದ್ದಾರೆ.