ದರ್ಶನ್ ರನ್ನು ನೋಡಲು ಬಳ್ಳಾರಿ ಜೈಲಿಗೆ ಬಂದಿದ್ದ ಮಹಿಳಾ ಅಭಿಮಾನಿಯೊಬ್ಬಕೆ ಬಳ್ಳಾರಿ ಸೆಂಟ್ರಲ್ ಜೈಲ್ ಮುಂಭಾಗ ಹೈ ಡ್ರಾಮಾ ನಡೆಸಿದ್ದಾರೆ. ವಿಜಯಲಕ್ಷ್ಮಿ ತರ ನಾನು ದರ್ಶನ್ ರನ್ನು ಮದುವೆ ಆಗ್ತೀನಿ, ನನಗೆ ದರ್ಶನ್ ಇಷ್ಟ ಎಂದು ರಂಪ ಮಾಡಿದ್ದಾಳೆ.
ಲಕ್ಷ್ಮೀ ಎಂಬ ಮಹಿಳಾ ಅಭಿಮಾನಿಯಾಗಿದ್ದು ದರ್ಶನ್ ನನ್ನು ನೊಡಲೇಬೇಕು ಅಂತಾ ಬಳ್ಳಾರಿ ಸೆಂಟ್ರಲ್ ಜೈಲ್ ಬಳಿ ಬಂದಿದ್ದಾರೆ. ಬೆಂಗಳೂರಿಂದ ಬಳ್ಳಾರಿ ಸೆಂಟ್ರಲ್ ಜೈಲಿಗೆ ಹಣ್ಣು ಹಂಪಲು, ಜೊತೆಗೆ ಆಧಾರ್ ಕಾರ್ಡ್ ಹಿಡಿದು ಬಂದಿದ್ದಾರೆ. ಈ ವೇಳೆ ಜೈಲು ಸಿಬ್ಬಂದಿ ಆಕೆಯನ್ನು ತಡೆದಿದ್ದಾರೆ.
ಮಾಧ್ಯಮದವರ ಮುಂದೆ ಮಾತನಾಡಿದ ಮಹಿಳಾ ಅಭಿಮಾನಿ, ವಿಜಯಲಕ್ಷ್ಮಿ ತರ ನಾನು ಮದುವೆ ಆಗ್ತಿನಿ, ನನಗೆ ದರ್ಶನ್ ಇಷ್ಟ. ಪರಪ್ಪನ ಅಗ್ರಹಾರಕ್ಕೆ ಹೋದೆ ಅಲ್ಲೂ ಬಿಡಲಿಲ್ಲ. ಈಗ ಇಲ್ಲಿಗೆ ಬಂದಿರುವೆ, ಹಣ್ಣು ಕೊಟ್ಟು ನೋಡಿ ಹೋಗುವೆ. ಚಿಕನ್ ಬೇಕು ಎಂದರೆ ಮಾಡಿ ತರುವೆ ಎಂದು ಮಹಿಳಾ ಅಭಿಮಾನಿ ಪಟ್ಟು ಹಿಡಿದು ಕೂತಿದ್ದಾರೆ.
ದರ್ಶನ್ ಏನ್ ತಪ್ಪು ಮಾಡಿದ್ದಾರೆ. ಬೇಕು ಅಂತಾ ಬಳ್ಳಾರಿಗೆ ತಂದು ಹಾಕಿದ್ದಾರೆ ಅಂತಾ ಜೈಲು ಸಿಬ್ಬಂದಿ ಜೊತೆ ಲಕ್ಷ್ಮೀ ವಾಗ್ವಾದ ನಡೆಸಿದ್ದಾರೆ. ದರ್ಶನ್ ನೋಡಲು ಸಂಬಂಧಿಗಳಿಗೆ ಮಾತ್ರ ಅವಕಾಶ ಎಂದಾಗ ನಾನು ದರ್ಶನ್ ರನ್ನು ಮದುವೆ ಆಗೋದಕ್ಕೂ ರೆಡಿಯಾಗಿ ಬಂದಿದ್ದೇನೆ ಎಂದು ಮಹಿಳೆ ಹೇಳಿದ್ದಾಳೆ.