ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ನನ್ನು ನೋಡಲು ಪತ್ನಿ ವಿಜಯಲಕ್ಷ್ಮೀ ಹಾಗೂ ಸಹೋದರ ದಿನಕರ್ ಬಳ್ಳಾರಿ ಜೈಲಿಗೆ ಆಗಮಿಸಿದ್ದಾರೆ. ಈ ವೇಳೆ ಸಹೋದರನ ಜೊತೆ ದರ್ಶನ್ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.
ಇಷ್ಟರ ಮಟ್ಟಿಗೆ ಬರ್ಬರ ಆಗುತ್ತೆ ಎಂದು ಸ್ವಲ್ಪನೂ ಅರ್ಥ ಆಗಲಿಲ್ಲ. ಏನೋ ಮಾಡೋಕೆ ಹೋಗಿ ಏನೋ ಆಯ್ತು. ಏನ್ ಸ್ಟಾರ್ ಗಿರಿ ಇದ್ದರೆ ಏನಾಯ್ತು, ಇದೀಗ ನೋಡು ಎಂದು ದುಃಖ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ. ಇದೇ ವೇಳೆ ಪತ್ನಿ ಹಾಗೂ ಸಹೋದರನ ಬಳಿ ಚಾರ್ಜ್ಶೀಟ್ ಹಾಗೂ ಬೇಲ್ ಅರ್ಜಿ ಬಗ್ಗೆ ವಿಚಾರಣೆ ನಡೆಸಿದ್ದಾರೆ.
ಕೃತ್ಯದ ಪೋಟೋಗಳು ವೈರಲ್ ಆಗಿರುವ ವಿಚಾರಗಳನ್ನೂ ದಿನಕರ್ ತಿಳಿಸಿದ್ದಾರೆ. ಬೇಲ್ ಸಿಗುತ್ತೆ ಧೈರ್ಯವಾಗಿರಿ ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ ಎನ್ನಲಾಗಿದೆ. ಇನ್ನು ಬಳ್ಳಾರಿ ಜೈಲಿನಲ್ಲಿ ದರ್ಶನ್ ಒಂದೇ ವಾರದಲ್ಲಿ ಸೊರಗಿದ್ದಾರೆ. ಮಂಕಾಗಿರುವ ದರ್ಶನ್ ಗಡ್ಡ ಬಿಟ್ಟು ಬಾಡಿದ ಮುಖದೊಂದಿಗೆ ಕಾಣಿಸಿಕೊಂಡಿದ್ದಾರೆ.