ಬೆಂಗಳೂರು: ಕೊಡಿಗೇಹಳ್ಳಿ ಠಾಣೆ ಇನ್ಸ್ಪೆಕ್ಟರ್ ರಾಜಣ್ಣ ಅವರ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದ್ದು, ಮಹಿಳೆಗೆ ಅಸಭ್ಯವಾಗಿ ಮೆಸೇಜ್ ಕಳಿಸಿದ ಆರೋಪಡಿ ಅಮಾನತು ಮಾಡಿ ಇಲಾಖಾ ತನಿಖೆಗೆ ಆದೇಶಿಸಲಾಗಿದೆ.
ಮಹಿಳೆಯೊಬ್ಬರ ಮೊಬೈಲ್ ಸಂಖ್ಯೆಯನ್ನ ಪಡೆದು ಆಕೆಗೆ ಅಸಭ್ಯವಾಗಿ ಚಾಟ್ ಮಾಡುತ್ತಿದ್ದು, ಜೊತೆಗೆ ಮಹಿಳೆಯನ್ನು ಠಾಣೆಗೆ ಕರೆಸಿಕೊಂಡು ರೂಂ ಗೆ ಬರಲು ಹೇಳಿದ್ದಾನಂತೆ. ಈ ಬಗ್ಗೆ ಸಾಕ್ಷಿ ಸಮೇತ ಡಿಸಿಪಿ ಲಕ್ಷ್ಮೀ ಪ್ರಸಾದ್ಗೆ ಮಹಿಳೆ ದೂರು ನೀಡಿದ್ದಾಳೆ.
ಇದನ್ನೂ ಓದಿ: ದೂರು ಕೊಡಲು ಬಂದ ಯುವತಿಯನ್ನೆ ಮಂಚಕ್ಕೆ ಕರೆದ್ರಾ ಪೊಲೀಸ್ ಅಧಿಕಾರಿ. ?
ಮಹಿಳೆ ದೂರಿನ ಮೇರೆಗೆ ಪ್ರಾಥಮಿಕ ತನಿಖೆಗೆ ಡಿಸಿಪಿ ಆದೇಶಿಸಿದ್ದರು. ಬಳಿಕ ಠಾಣೆಯ ಸಿಸಿಟಿವಿ ಪಡೆದು ತನಿಖೆ ನಡೆಸಿದ ಯಲಹಂಕ ಎಸಿಪಿ ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆ ರಾಜಣ್ಣನನ್ನ ಸಸ್ಪೆಂಡ್ ಮಾಡಲಾಗಿದೆ.