ಬೆಂಗಳೂರು: ಅಕ್ರಮವಾಗಿ ಗ್ಯಾಸ್ ರೀ ಫಿಲ್ಲಿಂಗ್ ಮಾಡುತ್ತಿದ್ದ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸುಮಂತ್ , ದೀಪಕ್ , ರಾಜು, ಪ್ರಕಾಶ್ ಹಾಗೂ ರಿತಿಕ್ ಬಂಧಿತ ಆರೋಪಿಗಳು ಎಂದು ಹೇಳಲಾಗಿದೆ. ನಗರದ ಬಿಟಿಎಂ ಲೇಔಟ್ನ 2ನೇ ಹಂತದಲ್ಲಿ ಘಟನೆ ಜರುಗಿದ್ದು, ಈ ವೇಳೆ ವಿವಿಧ ಕಂಪನಿಗಳಿಗೆ ಸೇರಿದ 750ಕ್ಕೂ ಹೆಚ್ಚು ಸಿಲಿಂಡರ್ಗಳನ್ನ ವಶಕ್ಕೆ ಪಡೆದಿದ್ದಾರೆ.
ಯಾವುದೇ ಲೈಸೆನ್ಸ್ ಇಲ್ಲದೆ ಅನಧಿಕೃತವಾಗಿ ಖಾಲಿ ನಿವೇಶನದಲ್ಲಿ ಶೆಡ್ ಹಾಕಿಕೊಂಡು, ಕಳ್ಳತನ ಮಾಡಿಕೊಂಡು ತಂದ ಸಿಲಿಂಡರ್ಗಳಿಗೆ ಜ್ಯೋತಿ, ಗೋ ಗ್ಯಾಸ್ ಏಜೆನ್ಸಿಗಳು ಗ್ಯಾಸ್ ರೀ ಫಿಲ್ಲಿಂಗ್ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಸಿಸಿಬಿ ಪೊಲೀಸರು 750ಕ್ಕೂ ಅಧಿಕ ಸಿಲಿಂಡರ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸರ್ಕಾರಿ ಸ್ವಾಮ್ಯದ ವಿವಿಧ ಕಂಪನಿಯ 75 ಸಿಲಿಂಡರ್, ಗೋಗ್ಯಾಸ್, ಜ್ಯೋತಿ ಸೇರಿದಂತೆ ಇತರೆ ಕಂಪನಿಯ 694 ಸಿಲಿಂಡರ್ಗಳನ್ನು ವಶಕ್ಕೆ ಪಡೆಯಲಾಗಿದೆ.
ಜೊತೆಗೆ ಕಾರ್ಯಾಚರಣೆ ವೇಳೆ 35 ಲಕ್ಷ ಮೌಲ್ಯದ 75 ರೀಫಿಲ್ಲಿಂಗ್ ರಾಡ್, ಕಂಪ್ರೆಸ್ಸರ್, ಪೈಪ್, ತೂಕದ ಯಂತ್ರಗಳನ್ನ ವಶಕ್ಕೆ ಪಡೆಯಲಾಗಿದೆ. ಇನ್ನು ಇಂಡಿಯನ್, ಭಾರತ್, ಹೆಚ್.ಪಿ ಕಂಪನಿಯ ಸಿಲಿಂಡರ್ಗಳೆಂದು ಜನರಿಗೆ ನಂಬಿಸಿ ಮಾರಾಟ ಮಾಡಲಾಗುತ್ತಿತ್ತು. ಈ ಕುರಿತು ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.