ಬೀದರ್: ಮಳೆಯಿಂದ ಬೆಳೆ ನಷ್ಟಕ್ಕೊಳಗಾದ ರೈತರಿಗೆ ರಾಜ್ಯ ಸರ್ಕಾರ ಎಕರೆಗೆ ₹25 ಸಾವಿರ ಪರಿಹಾರ ಕೊಡಬೇಕು ಎಂದು ಬೀದರ್ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಆಗ್ರಹಿಸಿದರು. ಬೀದರ ತಾಲ್ಲೂಕಿನ ಮನ್ನಳ್ಳಿ, ಯಾಕತಪುರ, ನಾಗೋರಾ ವಿವಿಧ ಗ್ರಾಮಗಳಲ್ಲಿ ಬೆಳೆ ಹಾನಿ ವೀಕ್ಷಿಸಿ ಮಾತನಾಡಿದರು. ‘ಹಿಂದಿನ ಬಿಜೆಪಿ ಸರ್ಕಾರದಂತೆ ಪೂರ್ಣ ಮನೆ ಹಾನಿಗೆ ₹5 ಲಕ್ಷ, ಭಾಗಶಃ ಹಾನಿಗೆ ₹2.5 ಲಕ್ಷ ಹಾಗೂ ಅಲ್ಪ ಹಾನಿಗೆ ₹ 50 ಸಾವಿರ ಪರಿಹಾರ ಕಲ್ಪಿಸಬೇಕು ಒತ್ತಾಯಿಸಿದರು.
ಬೀದರ ನಲ್ಲಿ ವಾರದ ಮಳೆಯಿಂದಾಗಿ ಸಾವಿರ ಎಕರೆಗೂ ಅಧಿಕ ಪ್ರದೇಶದಲ್ಲಿನ ಉದ್ದು, ಸೋಯಾಬೀನ್, ಕಬ್ಬು, ತೊಗರಿ ಮೊದಲಾದ ಬೆಳೆಗಳು ಹಾನಿಯಾಗಿವೆ. ಕ್ಷೇತ್ರದಲ್ಲಿ 200ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ಕೆಲ ಮನೆಗಳು ಸಂಪೂರ್ಣ ಕುಸಿದರೆ, ಇನ್ನು ಹಲವು ಮನೆಗಳಿಗೆ ಭಾಗಶಃ ಹಾನಿಯಾಗಿದೆ ಮಾಹಿತಿ ನೀಡಿದರು.