ಬಾಗಲಕೋಟೆ: ದೇಶದ ನಂಬರ್ 1 ಭಾರತೀಯ ಜೀವ ವಿಮಾ ನಿಗಮಭಾರತ ಸರ್ಕಾರದ ಭದ್ರತಾದೊಂದಿದೆ ದೇಶದಲ್ಲಿ ಲಕ್ಷಾಂತರ ಕುಟುಂಬಗಳಿಗೆ ಆಸರೆಯಾಗಿ ನಿಂತಿರುವುದು ಏಕೈಕ ಸಂಸ್ಥೆ ಎಂದರೆ ಅದು ಭಾರತೀಯ ಜೀವ ವಿಮಾ ನಿಗಮ.
ಒಂದೇ ಒಂದು ಕುಟುಂಬ ಎಲ್ಐಸಿ ಪಾಲಿಸಿ ಮಾಡಿದಂತ ಸಮಯದಲ್ಲಿ ಸಂಪೂರ್ಣ ಕುಟುಂಬಕ್ಕೆ ಆಸರೆಯಾಗಿ ನಿಂತಿದೆ ಎಂದು ನಿವೃತ್ತ ಶಿಕ್ಷಕ ಬಸವರಾಜ ಪಾಟೀಲ ಹೇಳಿದರು.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಎಲ್ಐಸಿ ಶಾಖೆಯಲ್ಲಿ ಭಾರತೀಯ ಜೀವ ವಿಮಾ ನಿಗಮ ಅಡಿಯಲ್ಲಿ ವಿಮಾ ಸಪ್ತಾಹ ಮತ್ತು ಗುರು ವಂದನ ಕಾರ್ಯಕ್ರಮ ನಡೆಯಿತು.
ಇಂದಿನ ಮಕ್ಕಳೇ ನಾಳಿನ ದೇಶದ ಪ್ರಜೆಗಳು ಮಕ್ಕಳಿಗೆ ಪ್ರತಿನಿತ್ಯ ಸಂಸ್ಕಾರವನ್ನು ಕಲಿಸಬೇಕು.ಭಾರತ ದೇಶ ಸಂಸ್ಕೃತದಿಂದ ಕೂಡಿದ ದೇಶ ಅದನ್ನು ಉಳಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಪಾಠದ ಜೊತೆಗೆ ಸಂಸ್ಕಾರವನ್ನು ಕಲಿಸಿ.
ವಿಶ್ವದ ಅತ್ಯುತ್ತಮ ಔಷದ ನಗು ಅತ್ಯುತ್ತಮ ಸಂಪತ್ತು ಬುದ್ಧಿ ಅತ್ಯುತ್ತಮ ಅಸ್ತ್ರ ತಾಳ್ಮೆ ಮತ್ತು ಅತ್ಯುತ್ತಮ ಭದ್ರತೆ ನಂಬಿಕೆ ಆ ನಂಬಿಕೆಯನ್ನ ಭಾರತೀಯ ಜೀವ ವಿಮಾ ನಿಗಮ ಉಳಿಸಿಕೊಂಡಿದೆ.
ಸಾವನ್ನು ಪಡೆಯಲು ಸಾವಿರ ದಾರಿಗಳಿವೆ ಆದರೆ ಬದುಕನ್ನ ಕಂಡುಕೊಳ್ಳಲು ಇರುವ ದಾರಿ ಒಂದೇ ಅದುವೇ ಆತ್ಮವಿಶ್ವಾಸ.
ಸ್ನೇಹ ಪ್ರೀತಿ ಅನ್ನೋದು ದೀಪ ಇದ್ದಹಾಗೆ ಹಚ್ಚೋದು ಸುಲಭ ಆದರೆ ಅದನ್ನು ಆರದಹಾಗೆ ನೋಡಿಕೊಳ್ಳುವುದು ತುಂಬಾ ಕಷ್ಟ
ನಿಷ್ಠೆಯಿಂದ ಮಾಡಿದ ಕೆಲಸ ದೇವರ ಪೂಜೆಗೆ ಸಮಾನ ನಾನು ಎಷ್ಟೋ ವರ್ಷ ಸೇವೆ ಮಾಡಿದೆ ಎಂಬುದು ಮಹತ್ವದಲ್ಲ ಎಷ್ಟು ಜನರಿಗೆ ಸಮಾಜಕ್ಕೆ ಒಳ್ಳೆಯದನ್ನು ಮಾಡಿದೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ.
ವೀರನಾದರೆ ಭಗತ್ ಸಿಂಗನಾಗು ಧೀರನಾದರೆ ಸಿಂಧೂರ ಲಕ್ಷ್ಮಣನಾಗು ಕಲೇಯಲ್ಲಿ ರವಿ ವರ್ಮನಾಗು ಭಕ್ತಿಯಲ್ಲಿ ಬಸವನಾಗು ಏನಾದರೂ ಆಗು ಮೊದಲು ನೀನು ಒಳ್ಳೆಯ ಮಾನವನಾಗು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಭಾರತೀಯ ಜೀವ ವಿಮಾ ನಿಗಮದ ರಬಕವಿ ಶಾಖೆಯ ವ್ಯವಸ್ಥಾಪಕರಾದ ಶಿವಪ್ರಸಾದ. ಡೆವಲಪರ್ಸ್ ಅಧಿಕಾರಿಗಳಾದ ಡಿ ಬಾಪುಗೌಡ. ಕೆಂಪಲಿಂಗನವರ. ಹುನ್ನೂರ. ಸಿದ್ದಪ್ಪ ಮೇನಿ ಸೇರಿದಂತೆ ಎಲ್ಐಸಿ ಪ್ರತಿನಿಧಿಗಳು ಶಿಕ್ಷಕರು ಮುದ್ದು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.