ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಕ್ರೌರ್ಯತೆ ಮಿತಿ ಮೀರಿತ್ತು ಎನ್ನುವ ವಿಚಾರ ಚಾರ್ಜ್ಶೀಟ್ನಲ್ಲಿ ಉಲ್ಲೇಖ ಆಗಿದೆ. ಈ ಬಗ್ಗೆ ಒಂದೊಂದೇ ವಿಚಾರ ರಿವೀಲ್ ಆಗುತ್ತಾ ಇದೆ. ವಿಚಾರಣೆ ವೇಳೆ ದರ್ಶನ್ ಹಲವು ವಿಚಾರಗಳನ್ನು ಬಾಯಿ ಬಿಟ್ಟಿದ್ದಾರೆ. ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಕ್ರೌರ್ಯವನ್ನು ಬಿಂಬಿಸುವ ಘಟನೆ ಬಗ್ಗೆ ಚಾರ್ಜ್ಶೀಟ್ನಲ್ಲಿ ಮಾಹಿತಿ ಲಭ್ಯವಾಗಿದೆ.
ರೇಣುಕಾಸ್ವಾಮಿ ಮಾಂಸದೂಟ ತಿನ್ನಿಸಿದ್ದಾಗಿ ವರದಿ ಆಗಿತ್ತು. ಇದು ನಿಜ ಅನ್ನೋದು ಚಾರ್ಜ್ಶೀಟ್ನಿಂದ ಗೊತ್ತಾಗಿದೆ. ರೇಣುಕಾಸ್ವಾಮಿಯನ್ನು ಕಟ್ಟಿ ಹಾಕಿ ಡಿ ಗ್ಯಾಂಗ್ ಊಟ ನೀಡಿತ್ತು. ರೇಣುಕಾಸ್ವಾಮಿ ಒಂದು ಅಗಳು ತಿಂದ ಕೂಡಲೇ ಅದು ಮಾಂಸಹಾರ ಅನ್ನೋದು ಗೊತ್ತಾಗಿದೆ. ಹೀಗಾಗಿ ಅದನ್ನು ಅವರು ಉಗುಳಿದ್ದಾರೆ. ಅನ್ನ ಉಗುಳುತ್ತೀಯಾ ಬೋ* ಮಗನೆ ಎಂದು ದರ್ಶನ್ ಬೈದಿದ್ದರು. ಆ ಬಳಿಕ ಶೂನಿಂದ ಒದ್ದು ದರ್ಶನ್ ವಿಕೃತಿ ಮೆರೆದಿದ್ದರು. ಬಳಿಕ ಬಿರಿಯಾನಿ ಊಟವನ್ನು ಬಲವಂತವಾಗಿ ತಿನ್ನಿಸಿದ್ದರು ಎಂಬುದು ಚಾರ್ಜ್ ಶೀಟ್ ನಲ್ಲಿ ಗೊತ್ತಾಗಿದೆ.
ದರ್ಶನ್ ಬಟ್ಟೆಯ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆ ಇರೋದು ಪತ್ತೆ ಆಗಿತ್ತು. ಅದೇ ರೀತಿ ಅವರು ಧರಿಸಿದ ಶೂಗೆ ಅಂಟಿದ್ದು ರೇಣುಕಾಸ್ವಾಮಿ ರಕ್ತ ಅನ್ನೋದು ಗೊತ್ತಾಗಿದೆ. ಶೂಗೆ ರಕ್ತ ಅಂಟಿಸಿಕೊಂಡೇ ಮೈಸೂರಿಗೆ ದರ್ಶನ್ ತೆರಳಿದ್ದರು. ಮೈಸೂರಿನ ಹೋಟೆಲ್ನಲ್ಲಿ ದರ್ಶನ್ ನ ಬಂಧಿಸಲಾಗಿತ್ತು. ಆಗ ಬೇರೊಂದು ಶೂ ಧರಿಸಿ ಪೊಲೀಸರ ಜೊತೆಗೆ ದರ್ಶನ್ ತೆರಳಿದ್ದರು. ಹೋಟೆಲ್ ಸಿಬ್ಬಂದಿ ಶೂ ಹಾಗೂ ಬಟ್ಟೆ ಪ್ಯಾಕ್ ಮಾಡಿ ಪತ್ನಿ ಮನೆಗೆ ಕಳುಹಿಸಿದ್ದರು. ನಂತರ ಇದನ್ನು ಪೊಲೀಸರು ಜಪ್ತಿ ಮಾಡಿದ್ದರು. ಬಟ್ಟೆ ವಾಶ್ ಮಾಡಿದ್ದರು ಕೆಮಿಕಲ್ನಿಂದ ರೇಣುಕಾಸ್ವಾಮಿ ರಕ್ತ ಪತ್ತೆಯಾಗಿದೆ. ದರ್ಶನ್ ಶೂ ವಾಶ್ ಮಾಡಿರದ ಕಾರಣ ಅದರಲ್ಲಿ ಇದ್ದ ರಕ್ತದಿಂದ ಡಿಎನ್ಎ ಮ್ಯಾಚ್ ಮಾಡಲಾಗಿದೆ.