ಚೀನಾದ ಅಗ್ರಗಣ್ಯ ಇ-ಕಾಮರ್ಸ್ ಸಂಸ್ಥೆ ಆಲಿಬಾಬ ಇದೀಗ `ಜೀವನ ಸಹಾಯಕ’ ಎಂಬ ಎಐ(ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಮೊಬೈಲ್ ಆಯಪ್ ಗೆ ಚಾಲನೆ ನೀಡಿದ್ದು ಇದರ ಮೂಲಕ ಆಹಾರ ವಸ್ತುಗಳಿಗೆ ಆರ್ಡರ್ ಮಾಡುವುದು, ಟ್ಯಾಕ್ಸಿಗಳನ್ನು ಬುಕ್ ಮಾಡಬಹುದು ಎಂದು ಮೂಲಗಳು ಹೇಳಿವೆ.
ಈ ಆಯಪ್ ಮೂಲಕ ಊಟವನ್ನು ಆರ್ಡರ್ ಮಾಡಬಹುದು, ಟ್ಯಾಕ್ಸಿಗಳನ್ನು, ಟಿಕೆಟ್ ಗಳನ್ನು ಬುಕ್ ಮಾಡಬಹುದು, ಸ್ಥಳೀಯ ಮನರಂಜನಾ ಆಯ್ಕೆಗಳನ್ನು ಅನ್ವೇಷಿಸಬಹುದು. ಜತೆಗೆ ಡಿಜಿಟಲ್ ಪಾವತಿಯ ಆಯಪ್ `ಆಲಿಪೇ’ಯ ಸೇವೆಗಳನ್ನು ಬಳಸಬಹುದಾಗಿದೆ.
ಎಐಯ ಸಾಮರ್ಥ್ಯ ವನ್ನು ಬಳಸಿಕೊಂಡು ಬಳಕೆದಾರರ ಅನುಕೂಲಗಳನ್ನು ಸುಧಾರಿಸಲು ಆಲಿಪೇ ಬದ್ಧವಾಗಿದೆ. ಎಐ ಆಧಾರಿತ ವ್ಯವಸ್ಥೆ ಪ್ರತಿಯೊಬ್ಬರ ದೈನಂದಿನ ಬದುಕಿನಲ್ಲಿ ಅಮೂಲ್ಯವಾದ ಸಾಧನಗಳಾಗಿ ಮಾರ್ಪಟ್ಟಿವೆ ಎಂದು ಆಲಿಬಾಬಾ ಸಂಸ್ಥೆಯ ಹೇಳಿಕೆ ತಿಳಿಸಿದೆ.