ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದರ್ಶನ್ ನನ್ನು ಬಂಧಿಸುವಾಗ ಪೊಲೀಸರು ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದರು. ಪೊಲೀಸರು ಬಂಧಿಸಲು ಹೋದಾಗ ದರ್ಶನ್ ಇದ್ದ ರೂಮ್ ನಂಬರ್ ಹೇಳದೇ ಹೋಟೆಲ್ ಸಿಬ್ಬಂದಿ ಸತಾಯಿಸಿದ್ದರು ಎನ್ನಲಾಗಿದೆ.
ಹೋಟೆಲ್ನಲ್ಲಿ ಕೆಲಕಾಲ ಕಾದಿದ್ದ ಪೊಲೀಸರಿಗೆ ದಿಢೀರನೆ ಮೂವರು ಬಾಡಿ ಗಾರ್ಡ್ಸ್ ಬಂದಿದ್ದರು. ಪೊಲೀಸರನ್ನು ಕಂಡು ತುರಾತುರಿಯಲ್ಲಿ ದರ್ಶನ್ ಕಾರಿನಲ್ಲಿ ಹೋಗುತ್ತಿದ್ದ ಬಾಡಿ ಗಾರ್ಡ್ಸ್ ಅಡ್ಡ ಹಾಕಿ ಮೊಬೈಲ್ ಪಡೆದಿದ್ದರು. ದರ್ಶನ್ ರೂಂ ತೋರಿಸುವಂತೆ ಬಾಡಿ ಗಾರ್ಡ್ಸ್ಗೆ ಪೊಲೀಸರು ಗದರಿಸಿದ್ದರು.
ಬಳಿಕ ರೂಮ್ ತೋರಿಸಲು ಕರೆದುಕೊಂಡು ಹೋಗಿದ್ದರು. ಮತ್ತೊಂದು ಕೀ ಬಳಸಿ ದರ್ಶನ್ ಇದ್ದ ರೂಮ್ ಓಪನ್ ಮಾಡಿದ್ದರು. ಈ ವೇಳೆ ರೂಮಿನಲ್ಲಿ ಸ್ನಾನ ಮಾಡುತ್ತಿದ್ದ ನಟ ದರ್ಶನ್ ಎರಡೇ ನಿಮಿಷದಲ್ಲಿ ಬಾತ್ ರೂಮ್ನಿಂದ ಹೊರ ಬಂದಿದ್ದರು. ಪೊಲೀಸರು ನಮ್ಮ ಜತೆಗೆ ಬರಬೇಕು ಎಂದಾಗ ಬಟ್ಟೆ ಹಾಕಿಕೊಂಡು ಬರುತ್ತೇನೆ ಸಾರ್ ಎಂದಿದ್ದರು. ಬಳಿಕ ದರ್ಶನ್ನನ್ನು ಎಸಿಪಿ ಚಂದನ್ ಹಾಗೂ ಇನ್ಸ್ಪೆಕ್ಟರ್ ಗಿರೀಶ್ ನಾಯ್ಕ್ ಪೊಲೀಸ್ ಜೀಪ್ ಹತ್ತಿಸಿಕೊಂಡು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದರು.