ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಸುಮಾರು ಮೂರು ತಿಂಗಳ ಬಳಿಕ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಸುಮಾರು 3991 ಪುಟಗಳ ಆರೋಪ ಪಟ್ಟಿಯಲ್ಲಿ ದರ್ಶನ್ ಎಂಡ್ ಗ್ಯಾಂಗ್ ಸದಸ್ಯರ ರಾಕ್ಷಸ ಕೃತ್ಯ ಬಯಲಾಗಿದೆ. ಇತ್ತ ರೇಣುಕಾಸ್ವಾಮಿ ಕುಟುಂಬಸ್ಥರು ಕಣ್ಣೀರು ಹಾಕ್ತಿದ್ರೆ ಅತ್ತ ಡಿ ಗ್ಯಾಂಗ್ ಜೈಲಿನಿಂದ ಹೊರ ಬರಲು ಸಿದ್ಧತೆಯಲ್ಲಿ ತೊಡಗಿದೆ.
ದರ್ಶನ್ ಎಂಡ್ ಗ್ಯಾಂಗ್ ಸದಸ್ಯರ ನ್ಯಾಯಾಂಗ ಬಂಧನದ ಅವದಿ ಇಂದಿಗೆ (ಸೆಪ್ಟೆಂಬರ್ 9) ಪೂರ್ಣಗೊಳ್ಳಲಿದೆ. ಕೋರ್ಟ್ನಲ್ಲಿ ಇದರ ವಿಚಾರಣೆ ಇಂದು ನಡೆಯಲಿದೆ. ಕೆಲವರ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ. ದರ್ಶನ್ ಇನ್ನೂ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿಲ್ಲ. ಹೀಗಾಗಿ, ಎಲ್ಲರ ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ ಆಗಲಿದೆ ಎಂದು ಹೇಳಲಾಗುತ್ತಿದೆ.
ಇಂದು ಬೆಂಗಳೂರಿನ 24ನೇ ACMM ಕೋರ್ಟ್ನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಕೊಲೆ ಆರೋಪಿಗಳ ವಿಚಾರಣೆ ನಡೆಯಲಿದೆ. ಆರೋಪಿಗಳ ಪರ ವಕೀಲರಿಗೆ ಚಾರ್ಜ್ಶೀಟ್ ಪ್ರತಿ ಸಲ್ಲಿಕೆ ಆಗಲಿದೆ. ದೋಷಾರೋಪ ಪಟ್ಟಿ ಸಿಕ್ಕರೆ ಅನೇಕ ವಿಚಾರಗಳು ರಿವೀಲ್ ಆಗಲಿವೆ. ದರ್ಶನ್ ವಿರುದ್ಧ ಇರುವ ಆರೋಪಗಳು ಈಗಾಗಲೇ ಸಂಚಲನ ಸೃಷ್ಟಿ ಮಾಡಿವೆ.
ಬಳ್ಳಾರಿ ಜೈಲಲ್ಲಿದ್ರೂ ದರ್ಶನ್ ಬಾಡಿ ಮೆಂಟೇನ್ ಮಾಡೋದನ್ನ ಬಿಟ್ಟಿಲ್ವಂತೆ. ದೇಹದ ಕಡೆ ನಟ ದರ್ಶನ್ ಹೆಚ್ಚು ಗಮನ ಕೊಡುತ್ತಿದ್ದಾರಂತೆ. ಮಾನಸಿಕವಾಗಿ ಕುಗ್ಗಿದ್ರೂ ದೇಹದ ಕಡೆಗೆ ಹೆಚ್ಚು ಒತ್ತು ನೀಡ್ತಿದ್ದಾರೆ ಅಂತ ತಿಳಿದುಬಂದಿದೆ. ಜೈಲಿನಲ್ಲೂ ದರ್ಶನ್ಗೆ ‘ಡೆವಿಲ್’ ಸಿನಿಮಾದೇ ಚಿಂತೆ ಕಾಡುತ್ತಿದೆಯಂತೆ. ಒಂದ್ವೇಳೆ ಜಿಮ್ ಮಾಡದಿದ್ದರೆ, ಬಾಡಿ ಶೇಪ್ ಹಾಳಾಗುವ ಆತಂಕ, ಅಲ್ಲದೇ ಒಮ್ಮೆಲೆ ಜಿಮ್ ಬಿಟ್ಟರೆ ಚರ್ಮ ಜೋತು ಬಿದ್ದು ವಿಲಕ್ಷಣ ಆಗುವ ಚಿಂತೆ ಕಾಡುತ್ತಿದೆಯಂತೆ. ಹೀಗಾಗಿ ಜೈಲಿನಲ್ಲಿ ಅನ್ನ ಬಿಟ್ಟು ಚಪಾತಿ, ಮುದ್ದೆ ಊಟಕ್ಕೆ ಕಾಟೇರ ಮೊರೆ ಹೋಗಿದ್ದಾರೆ. ಅಷ್ಟೇ ಅಲ್ಲ.. ವಿಟಮಿನ್ ಟ್ಯಾಬ್ಲೆಟ್ಸ್ನೂ ಸೇವಿಸುತ್ತಿದ್ದಾರೆ ಎನ್ನಲಾಗುತ್ತಿದೆ.