‘ಬಿಗ್ ಬಾಸ್ ಕನ್ನಡ ಸೀಸನ್ 10’ ವಿಜೇತ ಕಾರ್ತಿಕ್ ಮಹೇಶ್ ಸಖತ್ ಬ್ಯುಸಿಯಾಗಿದ್ದಾರೆ. ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ಸಿನಿಮಾಗಳ ಕೆಲಸಗಳಲ್ಲಿ ತೊಡಗಿಕೊಂಡಿದ್ದ ಕಾರ್ತಿಕ್ ಇದೀಗ ರಿಯಾಲಿಟಿ ಶೋಗೆ ನಿರೂಪಕರಾಗಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಈ ರಿಯಾಲಿಟಿ ಶೋ ಪ್ರಸಾರವಾಗಲಿದೆ.
ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ‘ರಾಮರಸ’ ಹೆಸರಿನ ಸಿನಿಮಾದಲ್ಲಿ ಕಾರ್ತಿಕ್ ತೊಡಗಿಕೊಂಡಿದ್ದಾರೆ. ಸದ್ಯ ಸಿನಿಮಾದ ಚಿತ್ರಕರಣ ನಡೆಯುತ್ತಿದ್ದು ಈ ಮಧ್ಯೆ ರಿಯಾಲಿಟಿ ಶೋಗೂ ಹೋಸ್ಟರ್ ಆಗಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಸ ರಿಯಾಲಿಟಿ ಶೋಗೆ ಕಾರ್ತಿಕ್ ಹೋಸ್ಟರ್ ಆಗಿದ್ದಾರೆ. ಸೆಪ್ಟೆಂಬರ್ 15ರಿಂದ ರಾತ್ರಿ 7 ಗಂಟೆಗೆ ಈ ಶೋ ಪ್ರಸಾರ ಕಾಣುತ್ತಿದೆ. ಇದರಲ್ಲಿ ಮತ್ತೊಂದು ವಿಶೇಷ ಎಂದರೆ ಕಿರುತೆರೆ ಕಲಾವಿದರ ಜೊತೆಗೆ ಕೆಲವು ಮಾಜಿ ಬಿಗ್ ಬಾಸ್ ಸ್ಪರ್ಧಿಗಳು ಬರುತ್ತಿದ್ದಾರೆ.
ವಿನಯ್ ಗೌಡ, ತನಿಷಾ ಕುಪ್ಪಂಡ, ನಮ್ರತಾ ಗೌಡ, ರಕ್ಷಕ್ ಬುಲೆಟ್, ಪ್ರಿಯಾಂಕಾ ಈ ಶೋನಲ್ಲಿ ಇರಲಿದ್ದಾರೆ. ‘ಎದುರಾಳಿಗಳ ಹುಟ್ಟಡಗಿಸೋದಕ್ಕೆ ಆನೆ ಬರ್ತಿದೆ, ಹುಶಾರು’ ಎನ್ನುತ್ತಾರೆ ವಿನಯ್ ಗೌಡ. ‘ಜಗತ್ತಿನಲ್ಲಿ ಮೂರು ತರಹದ ಜನರು ಇರುತ್ತಾರೆ. ಒಬ್ಬರು ರೂಲ್ಸ್ನ ಬ್ರೇಕ್ ಮಾಡೋರು, ಒಬ್ಬರು ಫಾಲೋ ಮಾಡೋರು. ಮೂರನೆಯವನು ನಾನು ರೂಲ್ಸ್ನ ಸೆಟ್ ಮಾಡುವವನು’ ಎಂದಿದ್ದಾರೆ ಕಾರ್ತಿಕ್.
ಈ ರಿಯಾಲಿಟಿ ಶೋನಲ್ಲಿ ಎರಡು ಟೀಂ ಇದೆ. ಎರಡು ಟೀಂಗಳಿಗೆ ನಾನಾ ರೀತಿಯ ಟಾಸ್ಕ್ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.