ಆಗ್ನೇಯ ಸುಡಾನ್ ನ ಸೆನ್ನಾರ್ನಲ್ಲಿನ ಮಾರುಕಟ್ಟೆಯಲ್ಲಿ ನಡೆದ ಶೆಲ್ ದಾಳಿಯಲ್ಲಿ 21 ಜನರು ಸಾವನ್ನಪ್ಪಿದ್ದು 67 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಶೆಲ್ ದಾಳಿಯ ಹೊಣೆಯನ್ನು ಅರೆಸೇನಾ ಪಡೆಗಳು ಹೊತ್ತುಕೊಂಡಿವೆ. ಏಪ್ರಿಲ್ 2023 ರಲ್ಲಿ ಯುದ್ಧ ಪ್ರಾರಂಭವಾದಾಗಿನಿಂದ ಇಂಥಹ ಸಾಕಷ್ಟು ಘಟನೆಗಳು ನಡೆಯುತ್ತಲೆ ಇದೆ. ಸುಡಾನ್ ಡಾಕ್ಟರ್ಸ್ ನೆಟ್ವರ್ಕ್ ಇದೇ ರೀತಿಯ ಸಾವುಗಳನ್ನು ವರದಿ ಮಾಡಿದೆ, ಆದರೆ ಗಾಯಗೊಂಡವರ ಸಂಖ್ಯೆ 70 ಕ್ಕಿಂತ ಹೆಚ್ಚು ಎಂದು ಹೇಳಿದೆ.
ಶೆಲ್ ದಾಳಿಗೆ ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆ (ಆರ್ಎಸ್ಎಫ್) ಹೊಣೆಯಾಗಿದೆ. ಮೊಹಮ್ಮದ್ ಹಮ್ದಾನ್ ಡಾಗ್ಲೋ ನೇತೃತ್ವದ RSF ದೇಶದ ವಾಸ್ತವಿಕ ಆಡಳಿತಗಾರ ಅಬ್ದೆಲ್ ಫತ್ತಾಹ್ ಅಲ್-ಬುರ್ಹಾನ್ ಅಡಿಯಲ್ಲಿ ಸುಡಾನ್ ಪಡೆಗಳೊಂದಿಗೆ ಹೋರಾಡುತ್ತಿದೆ. ಆರ್ಎಸ್ಎಫ್ ವ್ಯವಸ್ಥಿತವಾಗಿ ನಾಗರಿಕರು ಮತ್ತು ಸಂಸ್ಥೆಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಸರ್ಕಾರವು ಹಿಂದೆ ಆರೋಪಿಸಿದೆ.