ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಆರೋಗ್ಯ ಸಮುದಾಯ ಕೇಂದ್ರದಲ್ಲಿ ನ್ಯೂತನವಾಗಿ ಆರಂಭವಾದ ಡಯಾಲಿಸಿಸ್ ಕೇಂದ್ರ ಇಂದಿನಿಂದ ಪ್ರಾರಂಭವಾಗಿದೆ. ರಬಕವಿ ಬನಹಟ್ಟಿ ಆರೋಗ್ಯ ಸಮುದಾಯ ಕೇಂದ್ರದಲ್ಲಿ ಡಯಾಲಿಸಿಸ್ ಪ್ರಾರಂಭ ಹಿನ್ನಲೆಯಲ್ಲಿ ಅತಿ ಕಡು ಬಡವರು ಮತ್ತು ನಿರ್ಗತಕರಿಗೆ ಇದು ವರವಾಗಿದೆ.
ಬಹಳಷ್ಟು ಜನರು ಡಯಾಲಿಸಿಸ್ ಕಾಯಿಲೆಯಿಂದ ಬಳಲುತ್ತಿದ್ದರು ಆದರೆ ದೂರದ ಊರುಗಳಿಗೆ ಹೋಗಿ ಹಣ ಖರ್ಚು ಮಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು ಆದರೆ ಇಂದು ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರ ಪ್ರಾರಂಭವಾಗಿದ್ದು ನಮಗೆ ಬಹಳ ಸಂತೋಷವಾಗಿದೆ ಎಂದು ಹೇಳಿದರು.
ಡಯಾಲಿಸಿಸ್ ಮಾಡಿಸಿಕೊಂಡ ಶಶಿ ಕಮತಗಿ ಮಾತನಾಡಿ ನನಗೆ ವಾರದಲ್ಲಿ ಎರಡು ದಿನ ಡಯಾಲಿಸಿಸ್ ನಾನು ಮಾಡಿಸಿಕೊಳ್ಳಬೇಕಾಗಿತ್ತು. ಆದರೆ ದೂರದ ಊರುಗಳಿಗೆ ಹೋಗಿ ಅಲ್ಲಿ ಮೂರರಿಂದ ನಾಲ್ಕು ಸಾವಿರ ರೂಪಾಯಿ ಹಣ ಖರ್ಚು ಮಾಡಿ ಡಯಾಲಿಸಿಸ್ ಮಾಡಿಸುತ್ತಿದ್ದೆ ಆದರೆ ಇಂದು ನಮ್ಮ ರಬಕವಿ ಬನಹಟ್ಟಿ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್ ಕೇಂದ್ರ ಪ್ರಾರಂಭವಾಗಿದ್ದು ನಾನು ಉಚಿತವಾಗಿ ಇಲ್ಲಿ ಡಯಾಲಿಸಿಸ್ ಮಾಡಿಸಿದ್ದೇನೆ. ನನಗೆ ಎಲ್ಲಾ ರೀತಿ ಅನುಕೂಲವಾಗಿದೆ ಹಾಗೂ ಡಯಾಲಿಸಿಸ್ ಕಾಯಿಲೆಯಿಂದ ಬಳಲುತ್ತಿರುವವರು ಸರ್ಕಾರಿ ಆಸ್ಪತ್ರೆಗೆ ಬಂದು ನೀವು ಕೂಡ ಮಾಡಿಸಿಕೊಳ್ಳಿ ಇದರ ಉಪಯೋಗ ತೆಗೆದುಕೊಳ್ಳಿ ಎಂದು ಹೇಳಿದರು.
ಡಯಾಲಿಸಿಸ್ ಕೇಂದ್ರದ ವೈದ್ಯರು ಮೆಹಬೂಬ ಮಾತನಾಡಿ ಡಯಾಲಿಸಿಸ್ ಟೆಕ್ನಿಷಿಯಾಗಿ ನಾನು ಕೆಲಸ ಮಾಡುತ್ತಿದ್ದೇನೆ ಒಂದು ದಿನಕ್ಕೆ ನಾಲ್ಕು ರೋಗಿಗಳಿಗೆ ನಾನು ಡಯಾಲಿಸಿಸ್ ಮಾಡುತ್ತೇವೆ. ರೋಗಿಗಳು ಬಂದು ಉಚಿತವಾಗಿ ಡಯಾಲಿಸಿಸ್ ಮಾಡಿಸಿಕೊಳ್ಳಿ ನಾವು ಕೆಲಸ ಮಾಡಲು ಸಿದ್ದರಿದ್ದೇವೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ರಬಕವಿ ಬನಹಟ್ಟಿ ಆರೋಗ್ಯ ಸಮುದಾಯ ಕೇಂದ್ರದ ವೈದ್ಯ ಅಧಿಕಾರಿಗಳಾದ ಡಾ. ಎನ್ ಎಂ ನದಾಫ. ಅಪ್ಪಾಜಿ ಹೂಗಾರ ಸೇರಿದಂತೆ ಮುಂತಾದ ವೈದ್ಯರು ಇದ್ದರು.