ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಬಾಲಿವುಡ್ ನ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಬಣ್ಣ ಹಚ್ಚುತ್ತಿರುವ ನಟಿ ಏನೇ ಮಾಡಿದ್ರು ಸದಾ ಸುದ್ದಿಯಲ್ಲಿರುತ್ತಾರೆ. ಆದ್ರೆ ಕಳೆದ ಎರಡು ಮೂರು ವಾರಗಳಿಂದ ರಶ್ಮಿಕಾ ಸೈಲೆಂಟ್ ಆಗಿ ಬಿಟ್ಟಿದ್ದಾರೆ.ಅದಕ್ಕೆ ಕಾರಣವೂ ಇದೆ. ಅಂದ ಹಾಗೆ ಆ ಕಾರಣ ಕೇಳಿ ರಶ್ಮಿಕಾ ಅಭಿಮಾನಿಗಳು ಫುಲ್ ಶಾಕ್ ಆಗಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಸೋಷಿಯಲ್ ಮೀಡಿಯಾದಲ್ಲಿ ಆಘಾತಕಾರಿ ಪೋಸ್ಟ್ ಒಂದು ಮಾಡಿ ಸುದ್ದಿಯಾಗಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ರಶ್ಮಿಕಾ ಮಂದಣ್ಣ ಯಾವುದೇ ಸಭೆ ಸಮಾರಂಭಗಳಲ್ಲಿ ಭಾಗಿಯಾಗಿರಲಿಲ್ಲ. ಇದಕ್ಕೆ ಒಂದು ಕಾರಣ ಇದೆ. ಅದರ ಬಗ್ಗೆಯೇ ರಶ್ಮಿಕಾ ಮಂದಣ್ಣ ವಿವರವಾಗಿ ಬರೆದು ಪೋಸ್ಟ್ ಹಾಕಿದ್ದಾರೆ. ತಾವು ಏಕೆ ಎಲ್ಲೂ ಕಾಣಿಸಿಕೊಂಡಿಲ್ಲ? ಅನ್ನೋ ವಿಚಾರ ಬಹಿರಂಗಗೊಳಿಸಿದ್ದಾರೆ.
‘ಕಳೆದ ತಿಂಗಳು ನಾನು ಯಾವುದೇ ಪಬ್ಲಿಕ್ ಈವೆಂಟ್ನಲ್ಲಿ ಕಾಣಿಸಿಕೊಂಡಿರಲಿಲ್ಲ. ಎಲ್ಲೂ ಹೊರಗಡೆ ಕೂಡ ಹೋಗಿಲ್ಲ. ಇದಕ್ಕೆ ಕಾರಣ ನನಗೆ ಸಣ್ಣ ಆ್ಯಕ್ಸಿಡೆಂಟ್ ಒಂದು ಆಗಿದೆ. ವೈದ್ಯರು ಹೇಳಿದಂತೆ ರೆಸ್ಟ್ ತೆಗೆದುಕೊಂಡಿದ್ದೇನೆ. ಈ ಕಾರಣಕ್ಕೆ ಮನೆಯಲ್ಲೇ ಉಳಿಯಬೇಕಾಯ್ತು. ಹೀಗಾಗಿ ನಾನು ಎಲ್ಲೂ ಹೋಗಲು ಆಗಿಲ್ಲ ಎಂದು ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದಾರೆ.
“ನಾನು ಈಗ ಚೇತರಿಸಿಕೊಂಡಿದ್ದೇನೆ ಮತ್ತು ನನ್ನ ಎಂದಿನ ಚಟುವಟಿಕೆಗಳನ್ನು ಮಾಡಲು ಇನ್ನಷ್ಟು ಸೂಪರ್ ಆಕ್ಟೀವ್ ಆಗುವ ಹಂತದಲ್ಲಿದ್ದೇನೆ. ನಿಮ್ಮ ಬಗ್ಗೆ ಕಾಳಜಿ ವಹಿಸಲು ಯಾವಾಗಲೂ ಆದ್ಯತೆ ನೀಡಿ. ಯಾಕೆಂದರೆ, ಜೀವನ ತುಂಬ ಚಿಕ್ಕದು. ನಮಗೆ ನಾಳೆ ಅನ್ನೊದು ಇದೆಯೋ, ಇಲ್ಲವೋ ಎಂಬುದೇ ತಿಳಿದಿಲ್ಲ. ಆದ್ದರಿಂದ ಪ್ರತಿದಿನವು ಸಂತೋಷವನ್ನೇ ಆರಿಸಿಕೊಳ್ಳಿ” ಎಂದು ಸಲಹೆ ನೀಡಿರುವ ರಶ್ಮಿಕಾ, “ಮತ್ತೊಂದು ಅಪ್ಡೇಟ್, ನಾನು ಈಗ ಲಡ್ಡೂಗಳನ್ನು ತಿನ್ನುತ್ತಿದ್ದೇನೆ” ಎಂದು ಪೋಸ್ಟ ಹಾಕಿದ್ದಾರೆ. ಆದರೆ ರಶ್ಮಿಕಾ ಎಲ್ಲಿಯೂ ಕೂಡ ತಮಗೆ ಏನಾಗಿತ್ತು? ಯಾವ ರೀತಿ ಸಮಸ್ಯೆಗಳನ್ನು ಎದುರಿಸಿದೆ ಎಂದು ಹೇಳಿಕೊಂಡಿಲ್ಲ.