ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಮಂದಿಯ ವಿಚಾರಣೆ ಮುಕ್ತಾಯದ ಹಂತ ತಲುಪಿದ್ದು ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಚಾರ್ಜ್ ಶೀಟ್ ನಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡ ಮೇಲೆ ಒಟ್ಟು 10 ಕೇಸ್ ಗಳಲ್ಲಿ ದಾಖಲು ಮಾಡಲಾಗಿದೆ. ಪ್ರಮುಖವಾಗಿ ಕೊಲೆ, ಅಪಹರಣ ಹಾಗೂ ಸಾಕ್ಷ್ಯ ನಾಶ ಸೆಕ್ಷನ್ ಹಾಕಲಾಗಿದೆ.
ಕೇಸ್ಗೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಇಬ್ಬರ ಮೇಲೆಗೂ ಒಂದೇ ರೀತಿ ಕೇಸ್ಗಳನ್ನು ಹಾಕಲಾಗಿದೆ. ಈ ಮೂಲಕ ಕೇಸ್ನಲ್ಲಿ ಇಬ್ಬರ ಪಾತ್ರವೂ ಒಂದೇ ಎಂದು ಪೊಲೀಸರು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.
ಯಾವೆಲ್ಲಾ ಕೇಸ್ – ಗರಿಷ್ಠ ಶಿಕ್ಷೆ ಏನು?
ಐಪಿಸಿ ಸೆಕ್ಷನ್ 302 – ಕೊಲೆ ಆರೋಪ- ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ.
ಐಪಿಸಿ ಸೆಕ್ಷನ್ 201 – ಸಾಕ್ಷ್ಯ ನಾಶ/ ಸುಳ್ಳು ಮಾಹಿತಿ – ಜೈಲು ಶಿಕ್ಷೆ
ಐಪಿಸಿ ಸೆಕ್ಷನ್ 120(ಬಿ) – ಕ್ರಿಮಿನಲ್ ಪಿತೂರಿ ಅಥವಾ ಅಪರಾಧಕ್ಕೆ ಕುಮ್ಮಕ್ಕು/ 6 ಜೈಲು ಶಿಕ್ಷೆ
ಐಪಿಸಿ ಸೆಕ್ಷನ್ 364 – ಅಪಹರಣ ಅಥವಾ ಅದಕ್ಕೆ ಬೆಂಬಲ/ ಜೀವಾವಧಿ ಶಿಕ್ಷೆ ಅಥವಾ 10 ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ.
ಐಪಿಸಿ ಸೆಕ್ಷನ್ 355 – ವ್ಯಕ್ತಿಯನ್ನು ಅವಮಾನುವ ಉದ್ದೇಶದಿಂದ ಹಲ್ಲೆ / 2 ವರ್ಷ ಜೈಲು ಶಿಕ್ಷೆ
ಐಪಿಸಿ ಸೆಕ್ಷನ್ 143 – ಕಾನೂನು ಬಾಹಿರ ಗುಂಪು
ಐಪಿಸಿ ಸೆಕ್ಷನ್ 147 – ಗುಂಪು ಗಲಭೆ / 2 ವರ್ಷ ಜೈಲು ಶಿಕ್ಷೆ
ಐಪಿಸಿ ಸೆಕ್ಷನ್ 148 – ಮಾರಣಾಂತಿಕ ಆಯುಧ ಬಳಕೆ/ 3 ವರ್ಷ ಜೈಲು ಶಿಕ್ಷೆ.
ಐಪಿಸಿ ಸೆಕ್ಷನ್ 149 – ಗುಂಪು ಹಲ್ಲೆಯಲ್ಲಿ ಭಾಗಿ.
ಐಪಿಸಿ ಸೆಕ್ಷನ್ 34 – ಗುಂಪು ಹಲ್ಲೆಯಲ್ಲಿ ಭಾಗಿ ಯಾದ ಕೇಸ್ ಗಳು ದಾಖಲಾಗಿವೆ.
ಐಪಿಸಿ 302
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ಕೊಲೆ ಮಾಡಿದ ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ. ಇದಲ್ಲದೆ, ಕೊಲೆಯ ಆರೋಪ ಹೊತ್ತಿರುವ ವ್ಯಕ್ತಿ ತಪ್ಪಿತಸ್ಥನೆಂದು ಸಾಬೀತಾದರೆ ಐಪಿಸಿ ಸೆಕ್ಷನ್ 302 ಅನುಗುಣವಾಗಿ ಮರಣದಂಡನೆಯಿಂದ ಜೀವಾವಧಿ ಶಿಕ್ಷೆಯವರೆಗಿನ ಶಿಕ್ಷೆಯನ್ನು ವಿಧಿಸುತ್ತದೆ.
ಐಪಿಸಿ 201
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 201 ಅಪರಾಧವನ್ನು ಶಿಕ್ಷೆಯಿಂದ ರಕ್ಷಿಸುವ ಉದ್ದೇಶ/ ಯಾರಾದರೂ ಅಪರಾಧದ ಸಾಕ್ಷ್ಯವನ್ನು ಮರೆ ಮಾಡಿದರೆ ಅಥವಾ ನಾಶಪಡಿಸಿದರೆ ಈ ಕೇಸ್ ಹಾಕಲಾಗುತ್ತದೆ.
ಉಳಿದ 15 ಆರೋಪಿಗಳಿಗೆ ಪ್ರತ್ಯೇಕ ಕಾಲಂ?
ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿಗಳ ಸಂಖ್ಯೆ 17. ಈ ಪೈಕಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಮೇಲೆ ತಲಾ 10 ಕೇಸ್ಗಳನ್ನು ಹಾಕಲಾಗಿದೆ. ಉಳಿದ 15 ಆರೋಪಿಗಳಿಗೂ ಪ್ರತ್ಯೇಕ ಕೇಸ್ಗಳನ್ನು ಹಾಕಲಾಗಿದೆ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.